Top

ಕಾಂಗ್ರೆಸ್ ಈಗಿನ ಸ್ಥಿತಿ ನೋಡಿದ್ರೆ ಅಧಿಕಾರಕ್ಕೆ ಬರಲು ಸಾಧ್ಯನಾ - ಪ್ರಲ್ಹಾದ್ ಜೋಶಿ

ನಾನು 15 ದಿನದಿಂದ ಪ್ರವಾಸದಲ್ಲಿದ್ದೆ, ನನಗೆ ಆ ವಿಚಾರ ಗೊತ್ತಿಲ್ಲ

ಕಾಂಗ್ರೆಸ್ ಈಗಿನ ಸ್ಥಿತಿ ನೋಡಿದ್ರೆ ಅಧಿಕಾರಕ್ಕೆ ಬರಲು ಸಾಧ್ಯನಾ - ಪ್ರಲ್ಹಾದ್ ಜೋಶಿ
X

ಹುಬ್ಬಳ್ಳಿ: ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಸಂಪೂರ್ಣ ವಿಸ್ತರಣೆ ಪ್ರಧಾನ ಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ನನ್ನನ್ನು ಯಾರು ಅಭಿಪ್ರಾಯ ಕೇಳಿಲ್ಲ, ಕೇಳಿದ್ರೆ ನನ್ನ ಅಭಿಪ್ರಾಯ ತಿಳಿಸುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದ್ದಾರೆ.

ನಗರದಲ್ಲಿಂದು ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಯಾರಗಬೇಕು ಎಂಬ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ ಅನ್ನೊದು ಜಗ್ದಜಾಹಿರ, ನಾವು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಅಧಿಕಾರ ಇದ್ದರೋ ನಾವು ಕಚ್ಚಾಡಬೇಕು, ಆದ್ರೇ ಕಾಂಗ್ರೆಸ್ ಅಧಿಕಾರ ಇಲ್ಲದೇ ಕಚ್ಚಾಡುತ್ತಿದೆ ಎಂದರು.

ಇನ್ನು ಕಾಂಗ್ರೆಸ್​ನವರು ಮುಂದೆ ಅಧಿಕಾರರಕ್ಕೆ ಬರುವ ಕನಸು ಕಾಣುತ್ತಿದ್ದಾರೆ, ಅವರಿಗೆ ಬುದ್ದಿ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಈಗಿನ ಸ್ಥಿತಿ ನೋಡಿದ್ರೆ ಅಧಿಕಾರಕ್ಕೆ ಬರಲು ಸಾಧ್ಯನಾ(?)ಎಂದು ಪ್ರಶ್ನೆ ಮಾಡಿದರು.

ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ವಿಷಯದ ಬಗ್ಗೆ ಮಾತನಾಡಿದ ಅವರು, ನಾನು 15 ದಿನದಿಂದ ಪ್ರವಾಸದಲ್ಲಿದ್ದೆ, ನನಗೆ ಆ ವಿಚಾರ ಗೊತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ.

Next Story

RELATED STORIES