Top

ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ್ ಮುಲಾಲಿ ಆಗೋಕೆ ಸಾಧ್ಯ ಇಲ್ಲ

ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಅಂತ ನಾನು ಹೇಳಿರುವೆ

ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ್ ಮುಲಾಲಿ ಆಗೋಕೆ ಸಾಧ್ಯ ಇಲ್ಲ
X

ಹುಬ್ಬಳ್ಳಿ: ದಿನೇಶ್​ ಕಲ್ಲಹಳ್ಳಿ, ಕೇಸ್ ವಾಪಸ್ ನಿರ್ಧಾರದಲ್ಲಿ ಒತ್ತಡಗಳು ಏನಿದೆಯ ಗೊತ್ತಿಲ್ಲ. ಬೇರೆ ಏನಾದರೂ ತೊಂದರೆ ಆಗಿರಬಹುದು, ಇದು ಈಗ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿಯವರು ಮಂಗಳವಾರ ಹೇಳಿದ್ದಾರೆ.

ಧಾರವಾಡದಲ್ಲಿಂದು ಮಾತನಾಡಿದ ಅವರು, ದೇಶದಲ್ಲಿ ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ್ ಮುಲಾಲಿ ಆಗೋಕೆ ಸಾಧ್ಯ ಇಲ್ಲ. ಒಂದೇ ದಿನ ಹೀರೋ ಆಗಿ ಅವತ್ತೇ ಸಂಜೆ ವಿಲನ್ ಆದವರೂ ಇದ್ದಾರೆ ಎಂದಿದ್ದಾರೆ.

ಇನ್ನು ಸಿಡಿ ಕೇಸ್​ನಲ್ಲಿ ನನ್ನನ್ನೂ ಪಾರ್ಟಿ ಮಾಡಿದ್ದಾರೆ ಅಂತ ಮಾಧ್ಯಮಗಳಿಂದ ತಿಳಿದಿದೆ. ನಿನ್ನೆ ಯಾರೋ ಬಳ್ಳಾರಿಯ ನನ್ನ ಕಚೇರಿಗೆ ಹೋಗಿದ್ದರಂತೆ ಆದರೆ ಸಂಬಂಧಿಸಿದ ಕೋರ್ಟ್ ಕಾಪಿ ಕೊಟ್ಟಿದ್ದಾರೋ ಗೊತ್ತಿಲ್ಲ, ರಮೇಶ್ ಜಾರಕಿಹೊಳಿ ಇದೊಂದು ಷಡ್ಯಂತ್ರ ಅಂತ ಹೇಳಿದ್ದಾರೆ. ನಾನು ಎಲ್ಲಿಯೂ ಸಹ ನನ್ನ ಬಳಿ ಸಿಡಿ ಇವೆ ಅಂತ ಹೇಳಿಲ್ಲ. ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ ಎಂದು ಹೇಳಿದ್ದಾರೆ.

ಸದ್ಯ ಮಿಡಿಯಾಗಳು ನಿಮಗೆ ಏನೂ ಬೇಕಾದರು ಹುಟ್ಟಿಸಿಕೊಳ್ಳುತ್ತಿರಾ. ಟಿಆರ್​ಪಿ ಬರುವಂತಹದ್ದನ್ನು ಮಾತ್ರ ಹಾಕಿಕೊಳ್ಳುತ್ತಿರಾ. ಅದು ತಪ್ಪು ಅಲ್ವಾ, ನಾನೆಲ್ಲಿ ಹೇಳಿದ್ದೇನೆ ತೋರಿಸಿ. ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ದರಿದ್ದಾರೆ ಅಂತಾ ಹೇಳಿದ್ದೇನೆ ಅಷ್ಟೆ. ಆ ಮಾತಿಗೆ ನಾನು ಈಗಲೂ ಬದ್ಧ. ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಅಂತ ನಾನು ಹೇಳಿರುವೆ ಎಂದು ರಾಜಶೇಖರ ಮುಲಾಲಿಯವರು ಹೇಳಿದ್ದಾರೆ.

Next Story

RELATED STORIES