Top

ಪತ್ನಿಯ ಊರಲ್ಲಿ ಪತಿಯ ಭೀಕರ ಹತ್ಯೆ

ನಿನ್ನೆ ಸಂಜೆ ಹೊರಗಡೆ ಹೋಗಿ ಬರ್ತಿನಿ ಅಂತ ಪತ್ನಿ ಬಳಿ ಹೇಳಿ ಹೋಗಿದ್ದವನು, ಮರಳಿ ಸಿಕ್ಕಿದ್ದು ಶವವಾಗಿ. ಪತ್ನಿಯ ಊರಲ್ಲಿ ಆತನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ

ಪತ್ನಿಯ ಊರಲ್ಲಿ ಪತಿಯ ಭೀಕರ ಹತ್ಯೆ
X

ಹುಬ್ಬಳ್ಳಿ-ಧಾರವಾಡ: ಆತ ತನ್ನ ಪತ್ನಿಯನ್ನ ನೋಡಲು ಅತ್ತೆ, ಮಾವನ ಊರಿಗೆ ಬಂದಿದ್ದ. ಹೆರಿಗೆಗೆಂದು ಬಂದ ಪತ್ನಿ ಹಾಗೂ ಮಗುವನ್ನ ನೋಡಿ ಎರಡ್ಮೂರು ದಿನಗಳಿಂದ ಅಲ್ಲಿಯೇ ಕಾಲ ಕಳೆಯುತ್ತಿದ್ದ. ಆದರೆ, ಅದೆನಾಯ್ತೋ ಗೊತ್ತಿಲ್ಲ, ನಿನ್ನೆ ಸಂಜೆ ಹೊರಗಡೆ ಹೋಗಿ ಬರ್ತಿನಿ ಅಂತ ಪತ್ನಿ ಬಳಿ ಹೇಳಿ ಹೋಗಿದ್ದವನು, ಮರಳಿ ಸಿಕ್ಕಿದ್ದು ಶವವಾಗಿ. ಪತ್ನಿಯ ಊರಲ್ಲಿ ಆತನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.

ತನ್ನ ನಾಲ್ಕು ತಿಂಗಳ ಮುದ್ದಾದ ಕಂದಮ್ಮಳ್ಳನ್ನ ಮಡಿಲ್ಲಿನಲ್ಲಿಟ್ಟುಕೊಂಡು ಕಣ್ಣೀರಿಡುತ್ತಿರೋ ಪತ್ನಿ(!) ಏನಾಯ್ತು ಎಂದು ಗಾಬರಿಯಿಂದ ಮನೆ ಮುಂದೆ ಜಮಾಯಿಸಿರೋ ಗ್ರಾಮಸ್ಥರು(!)ಅತ್ತ ಕೊಲೆ ನಡೆದ ಸ್ಥಳದಲ್ಲಿ ಪೊಲೀಸ್ ರಿಂದ ತಲಾಶ್. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ. ಈ ಗ್ರಾಮದ ಜನ ಇಂದು ಬೆಳ್ಳಂ ಬೆಳಿಗ್ಗೆ ಬೆಚ್ಚಿಬಿದ್ದಿದ್ದರು. ಬೆಳಿಗ್ಗೆ ಊರ ಹೊರಗಡೆ ಭೀಕರ ಹತ್ಯೆ ಮಾಡಲಾದ ಶವವೊಂದು ಕಂಡ ಜನ ಹೌಹಾರಿದ್ದರು.

ಇನ್ನು ಕೊಲೆಯಾದ ವ್ಯಕ್ತಿ ಯಾರೆಂದು ಪರಿಶೀಲನೆ ಮಾಡಿದಾಗ ಗೊತ್ತಾಗಿದ್ದೆ, ಗ್ರಾಮದ ಅಳಿಯ 27 ವರ್ಷದ ಜಗದೀಶ್ ಕೊಲ್ಲಾಪುರ ಅಂತ. ಕಳೆದೆರಡೂ ವರ್ಷಗಳ ಹಿಂದೆ ಇದೇ ಅಂಚಟಗೇರಿ ಗ್ರಾಮದ ಅಕ್ಷತಾಳನ್ನ ಮದುವೆಯಾಗಿದ್ದ ಜಗದೀಶ್, ಹೆರಿಗೆಗೆಂದು ತವರೂ ಮನೆಗೆ ಬಂದಿದ್ದ ಪತ್ನಿಯನ್ನ ನೋಡಲು ಶನಿವಾರ ಗ್ರಾಮಕ್ಕೆ ಬಂದಿದ್ದ. ಕಳೆದ ಎರಡ್ಮೂರು ದಿನಗಳಿಂದ ಗ್ರಾಮದಲ್ಲೆ ಇದ್ದ ಜಗದೀಶ್ ಎಲ್ಲರ ಜೊತೆ ಬೆರೆತು ಚೆನ್ನಾಗಿಯೇ ಇದ್ದ. ನಾಲ್ಕು ತಿಂಗಳ ಹಸೂಗೂಸಿನೊಂದಿಗೆ ಕಾಲಕಳೆಯುತ್ತಾ ಸಂತೋಷದಿಂಲೇ ಇದ್ದ. ಆದರೆ, ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿ ಬರ್ತಿನಿ ಎಂದು ಪತ್ನಿಗೆ ಹೇಳಿದ್ದ ಜಗದೀಶ್ ತಡರಾತ್ರಿಯಾದರು ಮನೆಗೆ ಬಂದಿರಲಿಲ್ಲ. ಅತ್ತ ಆತನ ಊರಾದ ಹಾನಗಲ್​ಗೆ ಫೋನ್ ಮಾಡಿದರು ಸುಳಿವು ಇರಲಿಲ್ಲ. ಆದರೆ, ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋದ ಜನರಿಗೆ ರಸ್ತೆಯಲ್ಲಿ ಶವ ಬಿದ್ದಿದ್ದು ಗೊತ್ತಾಗಿದೆ. ಆದರೆ, ಅದ್ಯಾರು ಕೊಂದರು ಯಾಕೆ ಕೊಂದರು ಎನ್ನೋದು ಮಾತ್ರ ಪತ್ನಿ ಅಕ್ಷತಾಗೆ ಗೊತ್ತಿಲ್ಲ.

ಇನ್ನು ಮೂಲತಃ ಹಾವೇರಿ ಜಿಲ್ಲೆ ಹಾನಹಲ್ ಪಟ್ಟಣದ ನಿವಾಸಿಯಾಗಿದ್ದ ಜಗದೀಶ್, ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ, ಅತ್ತ ತನ್ನ ಊರಿನಲ್ಲಿಯೂ ಯಾವುದೇ ಗಲಾಟೆ ಜಗಳ ಎನ್ನೋ ಗೋಜಿಗೆ ಹೋದವನಲ್ಲವಂತೆ. ಹೀಗಾಗೇ ಕಳೆದ ಶನಿವಾರ ಪತ್ನಿ ಹಾಗು ಮಗು ನೋಡಿಕೊಂಡು ಬರ್ತಿನಿ ಎಂದು ಪತ್ನಿಯ ಊರಿಗೆ ಬಂದಿದ್ದಾನೆ. ಅಷ್ಟೇ ಎರಡ್ಮೂರು ದಿನ ಕಳೆಯುತ್ತಿದ್ದಂತೆ ಶವವಾಗಿ ಸಿಕ್ಕಿದ್ದು ಕುಟುಂಬಸ್ಥರಿಗೆ ಬಡಸಿಡಿಲು ಬಂಡಿದಂತಾಗಿದೆ. ಆದರೆ, ಧಾರವಾಡ ನಗರದಲ್ಲಿ ಹಣಕಾಸಿನ ವ್ಯವಹಾರವಿದೆ ಎನ್ನೋ ಸುಳಿವು ಸಧ್ಯ ಅಳಿಯ ಹಾಗೂ ಪೊಲೀಸರಿಗೆ ಗೊತ್ತಾಗಿದೆ. ಮೊನ್ನೆಯಷ್ಟೆ ತನ್ನ ಅಳಿಯನ ಹತ್ತಿರ ಧಾರವಾಡದಲ್ಲೊಬ್ಬರು ತನಗೆ ದುಡ್ಡ ಕೊಡ್ಬೇಕು ಎಂದು ಹೇಳಿದ್ದನಂತೆ. ಹೀಗಾಗೇ ಅದೇ ವಿಚಾರಕ್ಕೆ ಕೊಲೆಯಾಯ್ತಾ ಎನ್ನೋ ಅನುಮಾನ ಮೂಡುತ್ತಿದೆ. ಯಾಕೆಂದ್ರೆ ಇತ್ತ ಅಂಚಟಗೇರಿ ಗ್ರಾಮದಲ್ಲೂ ಆತನಿಗೆ ಯಾರು ದುಶ್ಮನ್ ಗಳಿರಲಿಲ್ಲ. ಹಣಕಾಸಿನ ವಿಚಾರವೇ ಹತ್ಯೆಗೆ ಕಾರಣವಾಗಿದಿಯಾ ಎನ್ನೋ ಪ್ರಶ್ನೆ ಸದ್ಯ ಕುಟುಂಬಸ್ಥರಲ್ಲಿ ಕಾಡುತ್ತಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ನಿನ್ನೆ ಸಂಜೆ ತನ್ನ ಮೊಬೈಲ್ ಫೋನ್ ಸ್ವಿಚ್​ಆಫ್ ಮಾಡಿ ಜಗದೀಶ್ ಹೊರಹೊಗಿದ್ದೇಕೆ ಎನ್ನೋದೆ ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಅಟ್​ಲಿಸ್ಟ್ ಮೊಬೈಲ್ ಪೋನ್ ಆನ್ ಇದ್ರೆ ಟವರ್ ಲೋಕೇಷನ್ ಆರೋಪಿಗಳ ಪತ್ತೆಗೆ ಸಹಕಾರಿ ಆಗುತ್ತಿತ್ತು. ಅದು ಏನೇ ಇರಲಿ ತನ್ನ ಪತ್ನಿ ಹಾಗೂ ಮಗುವನ್ನ ನೋಡೋಕೆ ಬಂದಿದ್ದ ಜಗದೀಶ್ ಬೀದಿ ಹೆಣವಾಗಿದ್ದು ಒಂದೆಡೆಯಾದರೆ ಇನ್ನು ಏನು ಅರಿಯದ ಮುದ್ದು ಕಂದಮ್ಮನಿಗೆ ಇನ್ಮುಂದೆ ಅಪ್ಪ ಇಲ್ಲ ಎನ್ನೋ ವಿಚಾರ ಹೇಗೆ ತಿಳಿಸಲಿ ಎನ್ನೋ ನೋವು ಈ ಬಾಣಂತಿಯದ್ದಾಗಿದೆ‌.

Next Story

RELATED STORIES