Top

ಅವೈಜ್ಞಾನಿಕ ರಸ್ತೆ ಕಾಮಗಾರಿ: ಮದುವೆ ದಿಬ್ಬಣ ಬಳಿಕ ಕಾದಿತ್ತು ಅಪಾಯ..!

ಹುಬ್ಬಳ್ಳಿಯಲ್ಲೊಂಂದು ಹೃದಯ ವಿದ್ರಾವಕ ಘಟನೆ

ಅವೈಜ್ಞಾನಿಕ ರಸ್ತೆ ಕಾಮಗಾರಿ: ಮದುವೆ ದಿಬ್ಬಣ ಬಳಿಕ ಕಾದಿತ್ತು ಅಪಾಯ..!
X

ಹುಬ್ಬಳ್ಳಿ: ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಕುದುರೆಯೊಂದು ಪ್ರಾಣಾಪಾಯಕ್ಕೆ ಸಿಲುಕಿರುವ ಹೃದಯ ವಿದ್ರಾವಕ ಹುಬ್ಬಳ್ಳಿಯ ಹೊಸ ಕೋರ್ಟ್ ಬಳಿಯ ಗಣೇಶ ಪಾರ್ಕ್ ಬಳಿ ನಡೆದಿದೆ.

ಮದುವೆ ದಿಬ್ಬಣ ಮುಗಿಸಿ ವಾಪಾಸಾಗುವ ವೇಳೆ, ರಸ್ತೆಯ ಪಕ್ಕದಲ್ಲೇ ಅವೈಜ್ಞಾನಿಕವಾಗಿ ಬಿಟ್ಟು ಹೋದ ರಾಡ್​ಗಳು ಕುದುರೆ ಕಾಲಿಗೆ ನಾಟಿದೆ. ಬಳಿಕ ಕುದುರೆ ಒದ್ದಾಡಿದ್ದು, ಇದರಿಂದ ಕುದುರೆಯ ಕಾಲು, ಎದೆ ಭಾಗ ಹಾಗೂ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

ಕೂಡಲೇ ಸ್ಥಳೀಯರು ಕುದುರೆಯನ್ನು ಪ್ರಾಣಾಪಾಯದಿಂದ ಕಾಪಾಡಿದ್ದು, ಸಮಾಜ ಸೇವಕ ರಾಹುಲ್ ಗೋಂಮ್ಸ್ ಚಿಕಿತ್ಸೆ ನೀಡಿದ್ದಾರೆ.
Next Story

RELATED STORIES