Top

ಹೆಚ್​​.ವಿಶ್ವನಾಥ್​ ನಮ್ಮ ಗುರುಗಳು ಅವರು ಏನೇ ಮಾತನಾಡಿದ್ರು ನಮಗೆ ಆಶೀರ್ವಾದವಿದಂತೆ

ಬಿ.ವೈ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು.

ಹೆಚ್​​.ವಿಶ್ವನಾಥ್​ ನಮ್ಮ ಗುರುಗಳು ಅವರು ಏನೇ  ಮಾತನಾಡಿದ್ರು ನಮಗೆ ಆಶೀರ್ವಾದವಿದಂತೆ
X

ಹುಬ್ಬಳ್ಳಿ-ಧಾರವಾಡ: ವಿಧಾನಪರಿಷತ್​ ಸದಸ್ಯ ಹೆಚ್​. ವಿಶ್ವನಾಥ್ ಅವರು ನಮ್ಮ ಗುರುಗಳು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್​.ವಿಶ್ವನಾಥ್​ ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರ ಮಾತು ನಮಗೆ ಆಶೀರ್ವಾದ ಎಂದಿದ್ದಾರೆ.

ಇನ್ನು ಹೆಚ್ ವಿಶ್ವನಾಥ್​ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನೇ ಮಾತನಾಡಿದ್ರು ನಮಗೆ ಆಶೀರ್ವಾದವಿದಂತೆ. ಆದರೆ, ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರ ಕೋರ್ಟ್​ನಲ್ಲಿದೆ, ಕಾನೂನು ಅಡೆತಡೆ ಇದೆ ಎಂದು ಹೆಚ್​ ವಿಶ್ವನಾಥ್​ ಅವರಿಗೆ ಸಚಿವ ಸ್ಥಾನ ಲಭಿಸದಿರುವುದಕ್ಕೆ ಸಮರ್ಥನೆ ನೀಡಿದ್ದಾರೆ.

ಸದ್ಯ ಬಸನಗೌಡ ಪಾಟೀಲ್ ಯತ್ನಾಳ್​ ಅವರ ಬಗ್ಗೆಯೂ ಸಹ ಅಪಾರ ಗೌರವವಿದೆ. ಹಿರಿಯ ನಾಯಕರು ಅವರಿಗೆ ಸ್ಥಾನ ಮಾನಸಿಗಬೇಕು ಎಂಬುದು ಕೂಡ ಆಗ್ರಹವಿದೆ. ಆದರೆ, ಸಿಡಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳ ಮುಂದೆ ಪಕ್ಷದ ಆಂತರಿಕ ವಿಚಾರ ಮಾತನಾಡಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.

ಅದುವಲ್ಲದೇ, ಸಿಪಿ ಯೋಗೇಶ್ವರ್​ ಅವರ ಮೇಲೆ ಗಂಭೀರ ಆರೋಪಗಳಿದ್ರೆ ವರಿಷ್ಠರ ಗಮನಕ್ಕೆ ತಂದರೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಬಿ.ವೈ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಸಿಎಂ ಮಗ ಅಂತ ಆರೋಪ ಮಾಡುತ್ತಾರೆ. ನಮ್ಮ ಇಲಾಖೆ ಅಲ್ಲ, ಬೇರೆ ಇಲಾಖೆಗೂ ಅವರು ಕೈ ಹಾಕಿಲ್ಲ ಎಂದು ರಮೇಶ್​ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES