Top

ಮಾವನಿಗೆ ಬೆದರಿಸಿ ಒಂದು ಕೋಟಿ ಮೌಲ್ಯದ ಬಂಗಾರ ದೋಚಿದ ಸೊಸೆ

ಪೊಲೀಸರೇ ಜೀವ ಬೆದರಿಕೆ ಹಾಕಿ ಇವರ ಬಳಿಯಿದ್ದ ಕೋಟಿ ಕೋಟಿ ಮೌಲ್ಯದ ಬಂಗಾರವನ್ನ ದೋಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಮಾವನಿಗೆ ಬೆದರಿಸಿ ಒಂದು ಕೋಟಿ ಮೌಲ್ಯದ ಬಂಗಾರ ದೋಚಿದ ಸೊಸೆ
X

ಹುಬ್ಬಳ್ಳಿ/ಧಾರವಾಡ: ಆತ ಪೊಲೀಸ್ ಇನ್ಸ್ಪೆಕ್ಟರ್. ಠಾಣೆಯ ತನಿಖಾಧಿಕಾರಿ. ಇದೀಗ ಅವರ ಠಾಣೆಯೆಲ್ಲೆ ಅವರ ವಿರುದ್ಧವೇ ಕೇಸೊಂದು ದಾಖಲಾಗಿದೆ.

ಇವರ ಹೆಸರು ಓಂಕಾರಗೌಡ ಪಾಟೀಲ. ಹುಬ್ಬಳ್ಳಿಯ ನವನಗರದ ನಿವಾಸಿಯಾಗಿರುವ ಇವರು ಹೆಸ್ಕಾನ ನಿವೃತ್ತ ಇಂಜನೀಯರಿವರು. ಇವರಿಗೆ ಪೊಲೀಸರೇ ಜೀವ ಬೆದರಿಕೆ ಹಾಕಿ ಇವರ ಬಳಿಯಿದ್ದ ಕೋಟಿ ಕೋಟಿ ಮೌಲ್ಯದ ಬಂಗಾರವನ್ನ ದೋಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಓಂಕಾರಗೌಡರ ಮೂರನೇ ಪುತ್ರ ಗದಿಗೆಪ್ಪಗೌಡ ಕಳೆದ ಮಾರ್ಚನಲ್ಲಿ ಲಂಡನ್ ನಲ್ಲಿ ಆತ್ಮಹತ್ಯೆಗೆ ಮಾಡಿಕೊಂಡು ಸಾವನ್ನಪ್ಪಿದ್ದರು. ತದನಂತರ ಮಾವನ‌ ವಿರೋಧದ ಮಧ್ಯೆಯೂ ಸೊಸೆ ಶಿವಲೀಲಾ ಮಾವನಿಗೆ ಜೀವ ಬೆದರಿಕೆ ಹಾಕಿ ಬಂಗಾರ ದೋಚಿದ್ದಾರಂತೆ.‌ ಅಷ್ಟೇ ಅಲ್ಲ ಮಾವನ ಬಳಿಯಿದ್ದ ಒಂದು ಕೋಟಿ ಮೌಲ್ಯದ 2 ಕೆಜಿ ಬಂಗಾರವನ್ನ ಪೊಲೀಸರು ಜೀವ ಬೆದರಿಕೆ ಹಾಕಿ ಸೊಸೆ ಶಿವಲೀಲಾರಿಗೆ ಕೊಟ್ಟಿದ್ದಾರೆ ಅನ್ನೋದು ಮಾವ ಓಂಕಾರಗೌಡರ ಆರೋಪ.

ಓಂಕಾರಗೌಡರ ಪುತ್ರ ಗದಿಗೆಪ್ಪಗೌಡರ ಸಾವನ್ನಪ್ಪಿದ ನಂತರ ಸೊಸೆ ಶಿವಲೀಲಾ ಚಿನ್ನಾಭರಣ ಕಿತ್ತುಕೊಂಡ ಬಗ್ಗೆ ಪದೇ ಪದೇ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಕರಣವನ್ನ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಓಂಕಾರಗೌಡ ಪಾಟೀಲ, ಹುಬ್ಬಳ್ಳಿಯ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ ಇದೀಗ ನವನಗರ ಠಾಣೆಯಲ್ಲಿ ಸಿಪಿಐ ಆಗಿರುವ ಪ್ರಭು ಸೂರೀನ್ ವಿರುದ್ದ ಅದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಸಿಪಿಐ ಜೊತೆ ಜೊತೆಗೆ ಓಂಕಾರಗೌಡರ ಸೊಸೆ ಶಿವಲೀಲಾ. ಶಿವಲೀಲಾರ ಸಹೋದರ ಸಂತೋಷಕುಮಾರ ವಿರುದ್ಧ ಸಹ‌ ಎಫ್ ಐಆರ್ ದಾಖಲಾಗಿದೆ. ಅಲ್ಲದೇ ಈ ಆಸ್ತಿ ಹಂಚಿಕೆ ಪ್ರಕರಣದಲ್ಲಿ ಪೊಲೀಸರು ಸೊಸೆಯ ಪರವಾಗಿ ಕಾರ್ಯನಿರ್ವಹಿಸಿರುವುದು ಬೆಳಕಿಗೆ ಬಂದಿದೆ.

ನ್ಯಾಯಾಲಯದ ಸೂಚನೆ‌ ಮೇರೆಗೆ ನವನಗರ ಪೊಲೀಸ ಠಾಣೆಯ ಸಿಪಿಐ ಪ್ರಭು ಸೂರಿನ್‌‌ ವಿರುದ್ಧ ಅದೇ ಠಾಣೆಯ ಪಿಎಸ್ ಐ ಜಕ್ಕನಗೌಡ ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಸಿಪಿಐ ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೆ‌ ದೂರು ದಾಖಲಾಗಿರವುದರಿಂದ ಸಿಪಿಐ ವಿರುದ್ದ ಪಿಎಸ್‌ಐ ಅದ್ಯಾವ ರೀತಿ ತನಿಖೆ ಮಾಡ್ತಾರೋ ಕಾಯ್ದು‌ ನೋಡಬೇಕಿದೆ. ಅಲ್ಲದೇ ಕೋಟಿ ರೂಪಾಯಿ ಬಂಗಾರ ದೋಚಿದ ಸೊಸೆಯ ವಿರುದ್ದ ಹೋರಾಟಕ್ಕೆ ಇಳಿದಿರುವ ಮಾವನಿಗೆ ನ್ಯಾಯ ಸಿಗುತ್ತಾ ಅನ್ನೋದು ಕತೂಹಲಕಾರಿಯಾಗಿದೆ.

Next Story

RELATED STORIES