Top

ರೈತರ ಕರಾಳ ದಿನ ಆಚರಣೆಗೆ ಕಳಸಾ-ಬಂಡೂರಿ ಹೋರಾಟಗಾರರ ಬೆಂಬಲ

ಮನೆಯಲ್ಲೇ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ

ರೈತರ ಕರಾಳ ದಿನ ಆಚರಣೆಗೆ ಕಳಸಾ-ಬಂಡೂರಿ ಹೋರಾಟಗಾರರ ಬೆಂಬಲ
X

ಹುಬ್ಬಳ್ಳಿ: ದೇಶದಾದ್ಯಂತ ರೈತರ ಕರಾಳ ದಿನ ಆಚರಣೆಗೆ ಹುಬ್ಬಳ್ಳಿಯ ಕಳಸಾ-ಬಂಡೂರಿ ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ.

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳು ಪೂರ್ಣಗೊಂಡಿದೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಕಳಸಾ-ಬಂಡೂರಿ ಹೋರಾಟಗಾರರು ಕೋವಿಡ್​ ಮಾರ್ಗಸೂಚಿ ಪಾಲನೆ ಮಾಡಿ ಮನೆಯಲ್ಲೇ ಕೈಗೆ ಕಪ್ಪು ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ಇನ್ನು ಹಿರಿಯ ರೈತ ಮುಖಂಡರು ನಗರದ ತಹಶಿಲ್ದಾರರನ್ನು ಭೇಟಿಯಾಗಿ ಕೇಂದ್ರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ಅಲ್ಲದೇ ರಾಜ್ಯ ಸರ್ಕಾರವು ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯ್ದೆ, ರೈತ ವಿರೋಧಿ ತಿದ್ದುಪಡಿಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ವಿಫಲತೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದರು.

Next Story

RELATED STORIES