Top

ವಾಹನ ತಪಾಸಣೆ ವೇಳೆ ನಕಲಿ ಪತ್ರಕರ್ತ ಪೊಲೀಸ್​ ಬಲೆಗೆ

ನಕಲಿ ಐಡಿ ಕಾರ್ಡ್​ ತೋರಿಸಿ ಅನಗತ್ಯ ಓಡಾಟ

ವಾಹನ ತಪಾಸಣೆ ವೇಳೆ ನಕಲಿ ಪತ್ರಕರ್ತ ಪೊಲೀಸ್​ ಬಲೆಗೆ
X

ಹುಬ್ಬಳ್ಳಿ: ಮಾಧ್ಯಮದ ನಕಲಿ ಐಡಿ ಕಾರ್ಡ್​ ತೋರಿಸಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ವ್ಯಕ್ತಿಯ ಬೈಕ್​ನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಕೊರೊನಾ ಲಾಕ್​ಡೌನ್​ ಹಿನ್ನೆಲೆ ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್​ ಮಾಡಿದ್ದು, ಸ್ವತಃ ಡಿಸಿಪಿ ರಾಮರಾಜನ್ ಫೀಲ್ಡ್​ಗಿಳಿದು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ಪತ್ರಕರ್ತ ಎಂದುಕೊಂಡು ನಕಲಿ ಐಡಿ ಕಾರ್ಡ್​ ತೋರಿಸಿ ಓಡಾಡುತ್ತಿದ್ದ ಜಾಕ್ ನೆಲ್ಸನ್ ಎನ್ನುವ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.

ಸದ್ಯ ಪೊಲೀಸರು ಬೈಕ್ ಸೀಜ್ ಮಾಡಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​​ನಿಂದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Next Story

RELATED STORIES