Top

ಜಮೀನಿಗೆ ಭೇಟಿ ನೀಡಿ ರೈತರ ಸಮಸ್ಯೆಯಾಲಿಸಿದ ಡಿ.ಕೆ ಶಿವಕುಮಾರ್​

ನಮ್ಮ ಗೋಳು ಯಾರು ಕೇಳಲ್ಲ-ಡಿ.ಕೆಶಿವಕುಮಾರ್​ ಮುಂದೆ ರೈತರ ಅಳಲು

ಜಮೀನಿಗೆ ಭೇಟಿ ನೀಡಿ ರೈತರ ಸಮಸ್ಯೆಯಾಲಿಸಿದ ಡಿ.ಕೆ ಶಿವಕುಮಾರ್​
X

ಹುಬ್ಬಳ್ಳಿ: ಜಿಲ್ಲೆಯ ರಾಯಪುರ ಗ್ರಾಮದ ರೈತರ ಜಮೀನುಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಭೇಟಿ ನೀಡಿ, ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ರೈತರ ಸಮಸ್ಯೆ ಆಲಿಸಿದ್ದಾರೆ.

ನಾವು ಈಗಾಗಲೇ ಕ್ಯಾಬೆಜ್,ಕ್ಯಾರೆಟ್,ಬೀಟ್ ರೂಟ್ ಸೇರಿ ಅನೇಕ ತರಕಾರಿ ಬೆಳೆದಿದ್ದೀವಿ. ಮೆಣಸಿನಕಾಯಿಗೆ ನಲವತ್ತು ರೂಪಾಯಿ ಇದ್ದ ಬೆಲೆ ಈಗ ಒಂದು ರೂಪಾಯಿ ಸಹ ಕೇಳುತ್ತಿಲ್ಲ. ಅದನ್ನ ಮಾರ್ಕೆಟ್​​ಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ನಮ್ಮ ಗೋಳು ಯಾರು ಕೇಳಲ್ಲ. ಕೊರೊನಾ ಲಾಕ್​ಡೌನ್​ನಿಂದ ನಾವು ಬೆಳೆದ ತರಕಾರಿ ಮಾರಾಟ ಮಾಡಲು ಪೊಲೀಸರು ಬಿಡುತ್ತಿಲ್ಲ ಎಂದು ರೈತರು ಆರೋಪಿದರು.

ಇನ್ನು ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಆಗುತ್ತಿಲ್ಲ. ಬಿತ್ತನೆ ಬೀಜ ವಿತರಣೆ ಕೇವಲ 5 ಏಕರೆ ಮಾತ್ರ ನೀಡಲಾಗುತ್ತಿದೆ. 8-10 ಎಕರೆ ಜಮೀನು ಹೊಂದಿದ್ದ ರೈತರಿಗೆ ಬೀಜ‌ ಕೊರತೆ ಆಗುತ್ತಿದೆ. ಇನ್ನುಳಿದ ಜಮೀನಿಗೆ ಬಿತ್ತನೆ ಬೀಜ‌ ಎಲ್ಲಿಂದ ತರಲಿ..? ಇನ್ನೂ ರಸಗೊಬ್ಬರ ಸಹ ಸಮರ್ಪಕವಾಗಿ ನೀಡುತ್ತಿಲ್ಲ. ಕೇವಲ ಮೂರು ಚೀಲ ಮಾತ್ರ ನೀಡಲಾಗುತ್ತಿದೆ‌ ಎಂದು ರೈತರು ಸಾಲು ಸಾಲು ಸಮಸ್ಯೆ ಹೇಳಿಕೊಂಡರು.

Next Story

RELATED STORIES