Top

ಧಾರವಾಡದಲ್ಲಿ ₹66 ಲಕ್ಷದ ಕೋವಿಡ್​ ಕೇರ್​ ಸೆಂಟರ್​ ಓಪನ್ ಆದ್ರೂ ನೋ ಯೂಸ್​

ಅರ್ಧದಷ್ಟು ಕಾಮಗಾರಿ ಬಾಕಿ ಇದ್ರೂ ಕೋವಿಡ್​ ಸೆಂಟರ್​ ಉದ್ಘಾಟನೆ

ಧಾರವಾಡದಲ್ಲಿ ₹66 ಲಕ್ಷದ ಕೋವಿಡ್​ ಕೇರ್​ ಸೆಂಟರ್​ ಓಪನ್ ಆದ್ರೂ ನೋ ಯೂಸ್​
X

ಧಾರವಾಡ: ಜಿಲ್ಲೆಯಲ್ಲಿ ಮೇಕ್ ಇನ್‌ ಶಿಫ್ಟ್ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿ 66 ಬೆಡ್‌ಗಳ ಕೋವಿಡ್ ಆಸ್ಪತ್ರೆ ನಿರ್ಮಿಸಲಾಗಿದೆ. ಉದ್ಘಾಟನೆಯಾಗಿ ಐದು ದಿನ ಕಳೆದ್ರೂ ಚಿಕಿತ್ಸೆ ಆರಂಭವಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಸರಿಯಾಗಿ ಕಾಮಗಾರಿ ಮುಗಿಯದಿದ್ದರೂ ಸಹ ಜಿಲ್ಲಾಡಳಿತ ತುರಾತುರಿಯಲ್ಲಿ ಉದ್ಘಾಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ವಿಪತ್ತು ನಿರ್ವಹಣಾ ನಿಧಿಯ 66 ಲಕ್ಷ ರೂಪಾ ಯಿ ವೆಚ್ಚದಲ್ಲಿ 1,500 ಚದರ ಮೀಟರ್ ವಿಸ್ತೀರ್ಣದ ಮೂರು ಕ್ಯಾಜುಯಾಲಿಟಿ ಕೇಂದ್ರ ನಿರ್ಮಿಸಲಾಗಿದೆ. ವಿದ್ಯುತ್ ಸೇರಿದಂತೆ ಇತರೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಉದ್ಘಾಟನೆಯಾದ ದಿನ, ಇನ್ನೊಂದು ದಿನದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಅಂತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಹೇಳಿದ್ದರು. ಆದ್ರೆ, 5 ದಿನ ಕಳೆದ್ರೂ ಯಾವುದೇ ಕಾರ್ಯ ಆರಂಭ ಆಗಿಲ್ಲ.

ಈ ಆಸ್ಪತ್ರೆ 20 ವರ್ಷಗಳ ಕಾಲ ಬಾಳಿಕೆ ಬರಲಿದೆ. ಅಗತ್ಯವಿದ್ದರೆ ಸ್ಥಳಾಂತರಿಸಬಹುದು. ಜಿಲ್ಲಾಡಳಿತದಿಂದ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಸಾಂದ್ರಕಗಳನ್ನೂ ನೀಡಲಾಗಿದೆ. ಕೋವಿಡ್ ಅಲೆ ಇಳಿದ ಬಳಿಕ ಲಸಿಕಾ ಕೇಂದ್ರ ಸೇರಿದಂತೆ ಇತರೆ ಉದ್ದೇಶಗಳಿಗೆ ಬಳಸಬಹುದು. ಈಗ ಕೊರೊನಾ ರೋಗಿಗಳ ಪ್ರಾಥಮಿಕ ಚಿಕಿತ್ಸೆಗೆ ಅನುಕೂಲವಾಗಬೇಕಿತ್ತು. ತೀವ್ರ ಉಸಿರಾಟದ ತೊಂದರೆ ಅನುಭವಿಸುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಬೇಕಾಗಿತ್ತು. ಆದ್ರೆ, ಇನ್ನೂ ಅರ್ಧದಷ್ಟು ಕಾಮಗಾರಿ ಬಾಕಿ ಇದೆ. ಹೀಗಿರುವಾಗ ಆಸ್ಪತ್ರೆಯನ್ನ ತುರಾತುರಿಯಲ್ಲಿ ಉದ್ಘಾಟಿಸಿದ್ದು ಯಾಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

Next Story

RELATED STORIES