Top

ಒಂದೇ ಏರಿಯಾದ 68 ಜನರಿಗೆ ಕೊರೊನಾ ಸೋಂಕು: ಇಲ್ಲಿ ನಿರ್ಬಂಧಗಳಿಗೆ ಡೋಟ್​​ಕೇರ್​

ಲಾಕ್​ಡೌನ್​ ಇದ್ರೂ ಅಂಗಡಿಗಳು ಓಪನ್​

ಒಂದೇ ಏರಿಯಾದ 68 ಜನರಿಗೆ ಕೊರೊನಾ ಸೋಂಕು: ಇಲ್ಲಿ ನಿರ್ಬಂಧಗಳಿಗೆ ಡೋಟ್​​ಕೇರ್​
X

ಧಾರವಾಡ: ಜಿಲ್ಲೆಯ ಸಿದ್ದೇಶ್ವರ ನಗರದಲ್ಲಿ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದ್ದು, ಒಂದೇ ಏರಿಯಾದ 68 ಜನರಿಗೆ ಸೋಂಕು ದೃಢಪಟ್ಟಿದೆ.

ಲಾಕ್​ಡೌನ್​ ಜಾರಿಯಲ್ಲಿದ್ದರೂ ಸಹ ಈ ನಗರದಲ್ಲಿ ಅಂಗಡಿಗಳು ಒಪನ್ ಇದ್ದು, ಜನ ಕೂಲಂಕುಶವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಪಾಸಿಟಿವ್​ ಸಂಖ್ಯೆ ಹೆಚ್ಚಾಗಿದ್ದರೂ ಸಹ ಮುಖ್ಯ ರಸ್ತೆ ಬಂದ್ ಮಾಡದೇ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಜನರ ಅನಾವಶ್ಯಕ ಓಡಾಟ ಹೆಚ್ಚಾಗಿದೆ.

ಇನ್ನು 68 ಜನರ ಪೈಕಿ 20 ಜನ ಮಾತ್ರ ಕೋವಿಡ್ ಕೇರ್ ಕೇಂದ್ರದಲ್ಲಿದ್ದು, ಉಳಿದವರು ಕೋವಿಡ್​​​ ಕೇರ್ ಸೆಂಟರ್​​ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈ ಏರಿಯಾದಿಂದ ಜನ ಸಂಚಾರ ನಡೆಸುತ್ತಿದ್ದು, ಈ ಬಗ್ಗೆ ಸುತ್ತಮುತ್ತಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Next Story

RELATED STORIES