Top

ಕೊರೊನಾ ನಿಯಮ ಉಲ್ಲಂಘನೆ: ಕಲ್ಯಾಣ ಮಂಟಪ ಮಾಲೀಕನ ವಿರುದ್ಧ ದೂರು ದಾಖಲು

ಮದುವೆಯಲ್ಲಿ 200ಕ್ಕೂ ಹೆಚ್ಚು ಜನ ಭಾಗಿ ಆರೋಪ

ಕೊರೊನಾ ನಿಯಮ ಉಲ್ಲಂಘನೆ: ಕಲ್ಯಾಣ ಮಂಟಪ ಮಾಲೀಕನ ವಿರುದ್ಧ ದೂರು ದಾಖಲು
X

ಹುಬ್ಬಳ್ಳಿ: ಕೊರೊನಾ ನಿಯಮ ಮೀರಿ ಅಧಿಕ ಜನ ಸೇರಿದ್ದ ಮದುವೆ ಮಂಟಪದ ಮೇಲೆ ಜಿಲ್ಲಾ ಪೊಲೀಸ್​ ಇಲಾಖೆ, ನಗರ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಧಾರವಾಡದ ರಾಯಲ್ ಮದುವೆ ಮಂಟಪ ಭೀಮಪ್ಪ ಬಾಂಬೆ ಎಂಬುವವರ ಕುಟುಂಬದ ಮದುವೆ ಸಮಾರಂಭ ನಡೆದಿದ್ದು, ಕಳೆದ ಎರಡು ದಿನಗಳ ಹಿಂದೆ 100 ಜನ ಸೇರಿಸಿ ಮದುವೆ ಮಾಡಲು ಅನುಮತಿ ಪಡೆದಿದ್ದರು. ಆದರೆ ಮದುವೆಯಲ್ಲಿ 200ಕ್ಕಿಂತ ಅಧಿಕ ಜನರು ಸೇರಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಮದುವೆ ಮನೆಯವರ ಹಾಗೂ ಕಲ್ಯಾಣಮಂಟಪದ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.

ಘಟನೆ ಸಂಬಂಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES