Top

ಡ್ರಗ್ಸ್​​ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ - ಸಿದ್ದರಾಮಯ್ಯ ಖಡಕ್​ ಪ್ರತಿಕ್ರಿಯೆ

  • ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರು ಕಠಿಣ ಕ್ರಮ ಕೈಗೊಳ್ಳಬೇಕು.
  • ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ.
  • 25 ಸಂಸದರು ಇದ್ರು ಪ್ರಯೋಜನವಾಗಿಲ್ಲ.
  • ನವೀನನನ್ನ ತಕ್ಷಣ ಬಂಧನ ಮಾಡಿದ್ರೆ ಬೆಂಕಿ ಹಚ್ಚುತ್ತಿರಲಿಲ್ಲ.
  • ಜೆಡಿಎಸ್​ನವರಿಗೆ ಸ್ಪಷ್ಟವಾದ ನಿಲುವಿಲ್ಲ.

ಡ್ರಗ್ಸ್​​ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ -  ಸಿದ್ದರಾಮಯ್ಯ ಖಡಕ್​ ಪ್ರತಿಕ್ರಿಯೆ
X

ಹುಬ್ಬಳ್ಳಿ-ಧಾರವಾಡ: ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರು ಕಠಿಣ ಕ್ರಮ ಕೈಗೊಳ್ಳಬೇಕು. ದೊಡ್ಡವರು-ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್​ ಅಹ್ಮದ್​ ವಿರುದ್ದ ಸಾಕ್ಷ್ಯ ಇದ್ರೆ ಗಲ್ಲಿಗೆ ಏರಿಸಲಿ ಅಂತಾ ಹೇಳಿದ್ದಾರೆ. ಅವರು ಆಸ್ತಿಯಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಿ ಅಂತಾ ಹೇಳಿದ್ದಾರೆ. ಅದೂ ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡಬಾರದು. ಸಾಕ್ಷ್ಯ ಸಿಕ್ಕರೆ ಕ್ರಮ ಕೈಗೊಳ್ಳಲಿ, ಸಂಬರಗಿ ಹೇಳಿದರು ಅಂತಾ ತನಿಖೆ ಮಾಡೋಕೆ ಆಗುತ್ತಾ(?) ಸಾಕ್ಷ್ಯ ಇದ್ರೆ ಯಾರನ್ನಾದ್ರು ತನಿಖೆ ಮಾಡಲಿ ಎಂದರು.

ಯೋಗೀಶ್​ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಸಹೋದರನಿಗೆ ನೋಟಿಸ್ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಬರ, ನೆರೆ ಪ್ರರಿಹಾರ ಇನ್ನೂ ಕೊಟ್ಟಿಲ್ಲ, 25 ಸಂಸದರು ಇದ್ರು ಪ್ರಯೋಜನವಾಗಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ, ಇದುವರೆಗೂ ಪರಿಹಾರ ನೀಡಿಲ್ಲ, ಮನೆ ಬಿದ್ದವರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಆನೆ ಹೊಟ್ಟಿಗೆ ಮೂರು ಕಾಸು ಅಲ್ಲ, ಆರು ಕಾಸಿನ ಮಜ್ಜಿಗೆ ನೀಡಿದಂತೆ ಪರಿಹಾರ ನೀಡಿದ್ದಾರೆ. ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಪಲ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸುತ್ತೇವೆ. ಮೂರು ವಾರಗಳ ಕಾಲ ಅಧಿವೇಶನ ನಡೆಸಲಿ ಅಂತಾ ನಾನು ಸಿಎಂ ಬಿಎಸ್​ವೈಗೆ ಪತ್ರ ಬರೆದಿರುವೆ. ನಾಲ್ಕು ಜನರ ವಿರುದ್ದ ಗೋಲಿಬಾರ್​ ಮಾಡಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸತ್ಯ ಎಂದು ಹೇಳಿದರು.

ಡಿ ಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ನವೀನನನ್ನ ತಕ್ಷಣ ಬಂಧನ ಮಾಡಿದ್ರೆ ಬೆಂಕಿ ಹಚ್ಚುತ್ತಿರಲಿಲ್ಲ. ಬೆಂಕಿ ಹಚ್ಚುವುದು ಕಾನೂನುಬಾಹಿರ, ನಾನು ಸಹ ಬೆಂಕಿ ಹಾಕಿರುವುದನ್ನ ಖಂಡಿಸುತ್ತೇನೆ. ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ, ಅವರು ಯಾರನ್ನಾದ್ರು ಮಾಡಿಕೊಳ್ಳಲಿ. ರಾಜ್ಯವಂತು ದಿವಾಳಿಯಾಗಿದೆ ಎಂದು ಬಿಎಸ್​ವೈ ಆಡಳಿತವನ್ನು ಟೀಕಿಸಿದ್ದಾರೆ.

ಸಿಎಂ ಬಿಎಸ್​ವೈ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಎನೂ ಮಾತನಾಡಿಕೊಂಡಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ಯಡಿಯೂರಪ್ಪನವರ ಜೊತೆಗೆ ಮಾತನಾಡಿದ್ದೆ. ಇಬ್ಬರು ಒಂದೇ ಆಸ್ಪತ್ರೆಯಲ್ಲಿದ್ವಿ, ಡಿಸ್ಚಾರ್ಜ್ ಆಗುವಾಗ ದೂರವಾಣಿ ಕರೆ ಮಾಡಿದ್ರು ಮಾತನಾಡಿದ್ದೆ. ಜೆಡಿಎಸ್​ನವರಿಗೆ ಸ್ಪಷ್ಟವಾದ ನಿಲುವಿಲ್ಲ, ಅವರು ಯಾವಾಗ ಬೇಕೋ ಅವಾಗ ಅವರನ್ನ ತಬ್ಬಿಕೊಳ್ಳತಾರೆ. ರಾಜ್ಯ ಅಂತೂ ದಿವಾಳಿ ಆಗಿ ಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

Next Story

RELATED STORIES