Top

ಎರಡು ಪಕ್ಷಗಳ ಮೈತ್ರಿ ಇದೊಂದು ತರ ಲವ್ ಮ್ಯಾರೇಜ್​ ಇದ್ದಂತೆ - ಮಾಜಿ ಶಾಸಕ ಕೋನರೆಡ್ಡಿ

ನಾಳೆಯ ಭಾರತ್ ಬಂದ್ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ

ಎರಡು ಪಕ್ಷಗಳ ಮೈತ್ರಿ ಇದೊಂದು ತರ ಲವ್ ಮ್ಯಾರೇಜ್​ ಇದ್ದಂತೆ - ಮಾಜಿ ಶಾಸಕ ಕೋನರೆಡ್ಡಿ
X

ಹುಬ್ಬಳ್ಳಿ: ನಾಳೆಯ ಭಾರತ್ ಬಂದ್​ಗೆ ನಮ್ಮ ಬೆಂಬಲವಿದೆ, ರೈತರೆಲ್ಲರೂ ನಮ್ಮಅಣ್ಣ-ತಮ್ಮಂದಿರು, ರೈತರು ಮಾಡುತ್ತಿರುವ ಹೋರಾಟ ಅದು ಅವರ ಬದುಕಿನ ಪ್ರಶ್ನೆ. ನಾಳೆಯ ಭಾರತ್ ಬಂದ್ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಜೆಡಿಎಸ್​​ ಮಾಜಿ ಶಾಸಕ ಎನ್​ ಹೆಚ್​ ಕೋನರೆಡ್ಡಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದಾಗ ಅದೊಂದು ತರ ಲವ್ ಮ್ಯಾರೇಜ್​ ಇದ್ದಂತೆ. ಎರಡು ಪಕ್ಷಗಳು ಸಮನ್ವಯದಿಂದ ಹೊರಟಾಗ ಏನು ಆಗಲ್ಲ, ಮೈತ್ರಿಯಲ್ಲಿ ಕೆಟ್ಟಗಾ ಮಾತ್ರ ಇಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದಿದ್ದಾರೆ.

ಇನ್ನು ಮೈತ್ರಿ ಮಾಡಿಕೊಂಡಾಗ ಸಹಮತದಿಂದ ನಡೆಯದಿದ್ದರೆ ಒಬ್ಬರಿಗೊಬ್ಬರು ಚರ್ಚೆ ಮಾಡುತ್ತಾರೆ. ಸರಕಾರ ಬಿದ್ದು ಹೋಗಿ ಒಂದುವರೆ ವರ್ಷ ಆಗಿದೆ. ಕುಮಾರಸ್ವಾಮಿಯವರು ತಮಗಾದ ನೋವನ್ನ ವ್ಯಕ್ತಪಡಿಸಿದ್ದಾರೆ. ಈಗ ಚರ್ಚೆ ಶುರುವಾಗಿದೆ ಎಲ್ಲಿಗೆ ಹೋಗುತ್ತೆ ನೋಡೋಣ. ಜನವರಿಯಲ್ಲಿ ಹೊಸ ಬೆಳವಣಿಗೆ ಆಗುವ ನಿರೀಕ್ಷೆಯಿದೆ ಎಂದು ಜೆಡಿಎಸ್​ ಮುಖಂಡ ಎನ್​ ಹೆಚ್​ ಕೋನರೆಡ್ಡಿ ಅವರು ಮಾತನಾಡಿದ್ದಾರೆ.

Next Story

RELATED STORIES