Top

ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ನಾನು ಸರ್ಕಾರಕ್ಕೆ ಸಲಹೆ ನೀಡಿರುವೆ - ಬಸವರಾಜ ಹೊರಟ್ಟಿ

ಎಲ್ಲಾ ಕಾರಣಗಳಿಂದಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡುವುದು ಅತಿ ಸೂಕ್ತ.

ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ನಾನು ಸರ್ಕಾರಕ್ಕೆ ಸಲಹೆ ನೀಡಿರುವೆ - ಬಸವರಾಜ ಹೊರಟ್ಟಿ
X

ಹುಬ್ಬಳ್ಳಿ: ಈಗಾಗಲೇ ಮುಖ್ಯಮಂತ್ರಿಗಳಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಪತ್ರ ಬರೆಯಲಾಗಿದೆ. ಬೆಳಗಾವಿಯವರಾದ ಮಾಂತೇಶ ತೊಟಗಿಮಠ ಅವರು ವಿಶೇಷವಾಗಿ ಅಧಿವೇಶನ ಕರೆಯುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದ್ದಾರೆ ಎಂದು ವಿಧಾನಸಭಾ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಾರಣಗಳಿಂದಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡುವುದು ಅತಿ ಸೂಕ್ತ. 2018ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗಿದೆ. ಅದಕ್ಕಾಗಿ ಇಲ್ಲಯೇ ಮಾಡಬೇಕೆಂದು ಸಲಹೆ ನೀಡಿದ್ದೇನೆ. ಜೂನ್​ನಲ್ಲಿ ಮಾಡಬಹುದು ಆದರೆ ಅದರ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಜೂನ್​ ಅಲ್ಲಿ ಆಗಲಿಲ್ಲ ಜುಲೈನಲ್ಲಿ ಮಾಡಬೇಕು. ಈಗಾಗಲೇ ಸಮಯದ ಅಭಾವದ ಕಾರಣ ಬೆಳಗಾವಿಯಲ್ಲಿ ಮಾಡುವುದು ಉತ್ತಮ ಎಂದಿದ್ದಾರೆ.

ಇನ್ನು ಅಧಿವೇಶನ ವಿಷಯ ಕ್ಯಾಬಿನೆಟ್​ನಲ್ಲಿ ಪ್ರಸ್ತಾಪವಾಗಿಲ್ಲ. ಹಾಗಾಗಿ ಚರ್ಚೆಗೆ ಬಂದಾಗ ಮತ್ತೊಮ್ಮೆ ನೆನಪಿಸಿ ಬೆಳಗಾವಿಯಲ್ಲಿ ಮಾಡಲು ತಿಳಿಸುವೆ. ಸಭಾ ಅಧ್ಯಕ್ಷರು, ಮತ್ತೆ ನಾನು ಕೂಡಾ ಮಾತನಾಡಿದ್ದು ಸರ್ಕಾರ ಬೆಳಗಾವಿಯಲ್ಲಿ ಮಾಡುವ ವ್ಯವಸ್ಥೆ ಮಾಡುವ ತಿರ್ಮಾನ ತೆಗೆದುಕೊಳ್ಳಬೇಕು ಎಂದರು.

ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ನಾನು ಸರ್ಕಾರಕ್ಕೆ ಸಲಹೆ ನೀಡಿರುವೆ. ಎಬಿಸಿಡಿ ಆಧಾರದ ಮೇಲೆ ಸಲಹೆ ನೀಡಿರುವೆ. ಬೆಂಗಳೂರು, ಜಿಲ್ಲಾ ಕೇಂದ್ರ, ತಾಲೂಕು ಹಾಗು ಹಳ್ಳಿಗಳಲ್ಲಿನ ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ಸಲಹೆ ನೀಡಿರುವೆ. ಶಿಕ್ಷಣ ಸಂಸ್ಥೆಗಳಲ್ಲಿ ಫೀ ವಿಚಾರದ ಬಗ್ಗೆ ನಾನು ಮನವಿ ಮಾಡಿರುವೆ. ಆದ್ಯತೆ ಮೇರೆಗೆ ಅಧಿಕಾರಿಗಳು ಫೀ ಡೋನೇಷನ್ ಮಾರ್ಗಸೂಚಿ ರಚಿಸಬೇಕು. ಹಳ್ಳಿಗಳಲ್ಲಿನ ಪೋಷಕರಿಗೆ ಫೀ ಕಟ್ಟಲು ಆಗಲ್ಲ. ಫೀ ಕೊಡಲು ಆಗದಿದ್ದರೇ ಮಕ್ಕಳಿಗೆ ಆನಲೈನ್ ಶಿಕ್ಷಣ ದೊರೆಯುವುದಿಲ್ಲ. ಶಿಕ್ಷಣ ಇಲಾಖೆಯಲ್ಲಿನ ಇರುವಂತಹ ಬೇಜವಾಬ್ದಾರಿ ಅಧಿಕಾರಿಗಳು ಬೇರೆ ಯಾವ ಇಲಾಖೆಯಲ್ಲೂ ಇಲ್ಲ. ನಾನು ಸಭಾಪತಿ ಆಗಿರುವುದರಿಂದ ನನ್ನ ಬಾಯಿ ಬಂದ್ ಆಗಿದೆ, ಆದರು ನಾನು ಮಾತನಾಡುವೆ. ಫೀ ವಿಚಾರವಾಗಿ ಸರ್ಕಾರ ಹಾಗೂ ಶಿಕ್ಷಣ ಸಚಿವರು ಸೂಕ್ತ ಮಾರ್ಗಸೂಚಿ ಹೊರಡಿಸಬೇಕು. ರಾಜ್ಯದಲ್ಲಿ ಶೇ.85ರಷ್ಟು ಶಿಕ್ಷಣ ಸಂಸ್ಥೆಗಳು ರಾಜಕಾರಣಿ ಹಾಗೂ ಅಧಿಕಾರಿಗಳದ್ದೆ ಇವೆ. ನಾನು ಸಭಾಪತಿ ಆಗಿರುವುದರಿಂದ ಮಾತನಾಡಲು ಆಗಲ್ಲ. ಸರ್ಕಾರ ಖಾಸಗಿ ಲಾಭಿಗೆ ಮಣಿಯಬಾರದು ಎಂದು ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿದ್ದಾರೆ.

Next Story

RELATED STORIES