Top

ಮೃತನ ಸಂಬಂಧಿಗಳಿಗೆ ಪೊಲೀಸರ ಮೇಲೆ ಡೌಟ್​

ರಾತ್ರಿಯೆ ಸ್ಟೇಷನ್​ನಿಂದ ಮನೆಗೆ ಕಳುಹಿಸಿದ್ದೇವು ಅಂತಾರೆ ಪೊಲೀಸರು. ಲಾಕ್ಅಪ್ ಡೆತ್ ಆಗಿದೆ ಅಂತಾರೆ ಪತಿಯ ಸಂಬಂಧಿಕರು.

ಮೃತನ ಸಂಬಂಧಿಗಳಿಗೆ ಪೊಲೀಸರ ಮೇಲೆ ಡೌಟ್​
X

ದಾವಣಗೆರೆ: ಪತಿರಾಯನೊಬ್ಬ ಎರಡನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದಾನೆ ಅಂತಾ ಪತ್ನಿ ಪೊಲೀಸರಿಗೆ ಕಂಪ್ಲೈಂಟ್ ನೀಡಿದರು. ಆ ವ್ಯಕ್ತಿ ಪತ್ತೆ ಮಾಡಿದ ಪೊಲೀಸರು ಎನ್ಕ್ವಯರಿ ಮಾಡಲು ಪೊಲೀಸರು ರಾತ್ರಿ ಸ್ಟೇಷನ್​ಗೆ ಕರೆಸಿದರು. ಆದೇನಾಯ್ತೋ ಗೊತ್ತಿಲ್ಲ, ಮಾರನೇ ದಿನ ಪತಿರಾಯ ಬಸ್​​ಸ್ಟಾಪ್​ನಲ್ಲಿ ಶವವಾಗಿ ಸಿಕ್ಕಿದ್ದ. ದೂರು ನೀಡಿದ ಪತ್ನಿಯ ರೋಧನೆ ಮುಗಿಲು ಮುಟ್ಟಿತ್ತು. ರಾತ್ರಿಯೆ ಸ್ಟೇಷನ್​ನಿಂದ ಮನೆಗೆ ಕಳುಹಿಸಿದ್ದೇವು ಅಂತಾರೆ ಪೊಲೀಸರು. ಲಾಕ್ಅಪ್ ಡೆತ್ ಆಗಿದೆ ಅಂತಾರೆ ಪತಿಯ ಸಂಬಂಧಿಕರು.

ದಾವಣಗೆರೆ ತಾಲೂಕಿನ ಮಾಯಕೊಂಡದ ಉಗ್ರಾಣ ನಿಗಮದ ಬಳಿ ಬಸ್ ಸ್ಟಾಪ್​ನಲ್ಲಿ ಅನಾಥವಾಗಿ ಬಿದ್ದ ಶವ. ಪತಿಗಾಗಿ ಗೋಳಾಡುತ್ತಿರುವ ಪತ್ನಿ, ಲಾಕ್ಅಪ್ ಡೆತ್ ಆಗಿದೆ ಅನ್ನೋ ಆರೋಪ ಮೃತನ ಸಂಬಂಧಿಕರದ್ದು, ಜನರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿರುವ ಪೊಲೀಸ್ ಅಧಿಕಾರಿಗಳು.

ದಾವಣಗೆರೆ ತಾಲೂಕಿನ ವಿಠ್ಠಲಾಪುರ ಗ್ರಾಮದ ನಿವಾಸಿ 45 ವರ್ಷದ ಮರುಳಸಿದ್ದಪ್ಪ ಪತ್ನಿ ಜೀವಂತವಾಗಿದ್ದಾಲೇ ಇನ್ನೊಂದು ಮದುವೆಯಾಗಲು ತಯಾರಿ ನಡೆಸಿದ್ದ. ಪಕ್ಕದ ಹೆಬ್ಬಾಳು ಗ್ರಾಮದ 18ರ ಯುವತಿಯೊಂದಿಗೆ ಕಾಣೆಯಾಗಿದ್ದ. ಮರುಳಸಿದ್ದಪ್ಪನ ಕುಟುಂಬದವರು ಮಿಸ್ಸಿಂಗ್ ಕಂಪ್ಲೈಂಟ್ ದಾಖಲಿಸಿದರು. ಮರುಳಸಿದ್ದಪ್ಪ ಪಕ್ಕದ ಹುಚ್ಚವ್ವನಹಳ್ಳಿ ಇದ್ದಾರೆ ಎಂಬ ಮಾಹಿತಿ ಬಂದಿತ್ತು. ಮರುಳುಸಿದ್ದಪ್ಪನನ್ನು ಅಲ್ಲಿಂದ ಕರೆ ತಂದು ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದರು. ಮಾರನೇ ದಿನ ಮರುಳಸಿದ್ದಪ್ಪ ಶವವಾಗಿ ಬಸ್ ಬಸ್​ ಸ್ಟಾಪ್​ನಲ್ಲಿ ಪತ್ತೆಯಾಗಿದೆ.

ರಾತ್ರಿ ಹನ್ನೆರಡಕ್ಕೆ ಬಿಟ್ಟು ಕಳುಹಿಸಿದ್ದೇವು ಎಂದು ಹೇಳ್ತಾರೆ. ಆದರೆ, ಹುಚ್ಚವ್ವನಹಳ್ಳಿಯಿಂದ ಸಂಬಂಧಿಕರೊಬ್ಬರು ರಾತ್ರಿ ಒಂದು ಗಂಟೆಗೆ ಊಟ ಹಾಗೂ ರಗ್ಗು ಕೊಟ್ಟು ಹೋಗಿದ್ದಾಗಿ ಮೃತನ ಸಂಬಂಧಿಗಳು ಹೇಳ್ತಾರೆ. ಒಟ್ಟಾರೆ ಪೊಲೀಸರ ಹಾಗೂ ಮೃತನ ಸಂಬಂಧಿಗಳ ಹೇಳಿಕೆಗಳು ಗೊಂದಲಮಯವಾಗಿವೆ. ಮೃತನ ಸಂಬಂಧಿಗಳು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತನ ಸಂಬಂಧಿಕರು ನ್ಯಾಯ ಸಿಗುವವರೆಗೆ ಶವ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಸ್ಟ್ ಮಾರ್ಟಂನಲ್ಲಿ ಸತ್ಯ ಬಹಿರಂಗವಾಗುತ್ತೆ, ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಮೃತನ ಸಂಬಂಧಿಗಳ ಮನವೊಲಿಕೆ ಪೊಲೀಸರು ಪ್ರಯತ್ನ ಮಾಡಿದರು. ಎರಡ್ಮೂರು ಗಂಟೆಗಳ ಪರಿಶ್ರಮದಿಂದ ಮೃತನ ಸಂಬಂಧಿಗಳ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ಅನುಮಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಲು ಮೃತನ ಸಂಬಂಧಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿಯಮದಂತೆ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ, ತನಿಖೆ ನಡೆಸುವುದಾಗಿ ಎಸ್ಪಿ ಹನುಮಂತರಾಯ ತಿಳಿಸಿದರು.

ಮದುವೆಯಾಗಿ ಮಕ್ಕಳಿದರು, ಮತ್ತೊಂದು ಮದುವೆಯ ಹುಚ್ಚು ಸಾವಿಗೆ ಔತಣವಾಗಿತ್ತು. ಮರುಳಸಿದ್ದಪ್ಪ ಲಾಕ್ಅಪ್ ಡೆತ್ತಾದ್ರಾ(?) ಯಾರಾದ್ರೂ ವಿಷಪ್ರಶಾನ ಮಾಡಿಸಿದ್ರಾ(?) ಅವರೇ ವಿಷ ಸೇವಿಸಿದ್ರಾ(?) ಅಥವಾ ಮತ್ತಾವುದೋ ಕಾರಣ ಸಾವಾಗಿ ಕಾಡ್ತಾ. ಎಂಬುದನ್ನು ಪೋಸ್ಟ್ಮಾರ್ಟಂ ರಿಪೋರ್ಟ್ ಬಯಲು ಮಾಡಲಿದೆ.

Next Story

RELATED STORIES