Top

ಆ ವ್ಯಕ್ತಿ ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದಿರೋದು - ಶಾಸಕ ಎಂ.ಪಿ ರೇಣುಕಾಚಾರ್ಯ

ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು.

ಆ ವ್ಯಕ್ತಿ ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದಿರೋದು  - ಶಾಸಕ ಎಂ.ಪಿ ರೇಣುಕಾಚಾರ್ಯ
X

ದಾವಣಗೆರೆ: ಜಮೀರ್ ಅಹ್ಮದ್ ಚಿಲ್ಲರೇ ಗಿರಾಕಿ, ಗುಜರಿ ಗಿರಾಕಿ, ಜಮೀರ್ ಎನೇ ಗಳಿಸಿದರು ಅದು ಅನೈತಿಕ ಚಟುವಟಿಕೆಗಳಿಂದಲೇ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶನಿವಾರ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದರೆ ಅವರ ಮನೆ ವಾಚ್​ಮನ್ ಆಗುವುದಾಗಿ ಹೇಳಿದ್ದರು. ಆದರೆ, ಯಡಿಯೂರಪ್ಪ ಸಿಎಂ ಆಗಿದ್ದಾರೆ ಆದ್ರೇ ಜಮೀರ್ ಅವರು ವಾಚ್​ಮನ್ ಆಗಲಿಲ್ಲ. ಜಮೀರ್​ ಒಂದು ರೀತಿ ಎರಡು ನಾಲಿಗೆ ವ್ಯಕ್ತಿ ಎಂದರು.

ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ ಎಂದಿದ್ದಾರೆ.

ಜಮೀರ್ ಅನೈತಿಕ ಚಟುವಟಿಕೆಗಳಿಂದ ಅರ್ಥಿಕವಾಗಿ ಸದೃಢರಾಗಿದ್ದಾರೆ. ಹಲವು ಬಾರಿ ಶ್ರೀಲಂಕಾ ಕ್ಯಾಸಿನೋವಾಗೂ ಹೋಗಿದ್ದಾರೆ. ಅವರ ಆಸ್ತಿ ನೈತಿಕ ಮಾರ್ಗದಿಂದ ಬಂದಿದಲ್ಲ, ಅವನು ಎರಡು ನಾಲಿಗೆ ವ್ಯಕ್ತಿ. ಕೊಟ್ಟ ಮಾತನಿಂದ ಎಂದೂ ನಡೆದುಕೊಂಡಿಲ್ಲ, ಅವನು ಹೇಳಿದಂತೆ ಬಿಎಸ್ವೈ ಮನೆ ವಾಚ್ಮನ್ ಆಗಬೇಕಿತ್ತು ಎಂದು ಜಮೀರ್​ ಅಹ್ಮದ್​ ಖಾನ್​ಗೆ ತಿರುಗೇಟು ನೀಡಿದ್ದಾರೆ.

ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಿದೆ. ತನಿಖೆ ನಂತರ ಸತ್ಯಾಸತ್ಯಾತೆ ಹೊರಬರುತ್ತದೆ. ಹಿಂದಿನ ಸರ್ಕಾರದ ವೈಫಲ್ಯಗಳಿಂದ ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಮ್ಮ ಸರ್ಕಾರ ಅಧಿಕಾರವಿದ್ದಾಗ ಇಂಥ ದಂಧೆ ಇರಲಿಲ್ಲ, ನಾವು ಡಗ್ಸ್ ದಂಧೆ ಮಟ್ಟ ಹಾಕುತ್ತೇವೆ ಎಂದು ತಿಳಿಸಿದರು.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಹಾಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರನ್ನು ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾವೇರಿ ನಿವಾಸದಲ್ಲಿ ಎಚ್ಡಿಕೆ ಅವರು ಬಿ.ಎಸ್​ ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದಾರೆ. ಯಾವುದೇ ರಾಜಕೀಯ ಉದ್ದೇಶಿತ ಭೇಟಿಯಲ್ಲ, ಕೇವಲ ಅಭಿವೃದ್ಧಿ ಹಿನ್ನೆಲೆ ಭೇಟಿ ಆಗಿದ್ದಾರೆ. ಸರ್ಕಾರ ಸ್ವಾತಂತ್ರ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿವೇಶನದಲ್ಲಿ ಡ್ರಗ್ಸ್ ಮಟ್ಟಹಾಕಲು ಚರ್ಚೆಗೆ ಬೆಂಬಲ ನೀಡಿದ್ರೆ ಸ್ವಾಗತ. ಡಿಜೆ ಹಳ್ಳಿ, ಕೆ.ಜಿ. ಹಳ್ಳಿ ಘಟನೆ ಬಗ್ಗೆ ಬೆಳಕು ಚೆಲ್ಲಿದ್ರೆ ಸ್ವಾಗತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.

Next Story

RELATED STORIES