Top

ಕೋಡಿಹಳ್ಳಿ ಚಂದ್ರಶೇಖರ್​ಗೆ ಒಳ್ಳೆಯದಾಗಲ್ಲ, ಮಂಜುನಾಥ ಸ್ವಾಮಿ ಬಿಡಲ್ಲ - ಸಚಿವ ವಿ.ಸೋಮಣ್ಣ ವಾಗ್ದಾಳಿ

ಕೋಡಿಹಳ್ಳಿ ಚಂದ್ರಶೇಖರ್ ನಾಮವಾಶೇಷ ಆಗ್ತೀರಿ ಹುಷಾರ್(!)

ಕೋಡಿಹಳ್ಳಿ ಚಂದ್ರಶೇಖರ್​ಗೆ ಒಳ್ಳೆಯದಾಗಲ್ಲ, ಮಂಜುನಾಥ ಸ್ವಾಮಿ ಬಿಡಲ್ಲ - ಸಚಿವ ವಿ.ಸೋಮಣ್ಣ ವಾಗ್ದಾಳಿ
X

ದಕ್ಷಿಣಕನ್ನಡ: ಕೋಡಿಹಳ್ಳಿ ಚಂದ್ರಶೇಖರ್ ನೌಕರರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಸೋಮವಾರ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ. ಕೋಡಿಹಳ್ಳಿ ಚಂದ್ರಶೇಖರ್​ಗೆ ಒಳ್ಳೆದಾಗಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಬಿಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ನೌಕರರ ಕುಟುಂಬದ ಶಾಪ ಸುಮ್ಮನೆ ಬಿಡಲ್ಲ. ನನಗೆ ಕೋಡಿಹಳ್ಳಿ ಇತಿಹಾಸ ಗೊತ್ತಿದೆ. ಕೋಡಿಹಳ್ಳಿ ಚಂದ್ರಶೇಖರ್ ಸಂಜೆ ಒಳಗಡೆ ಸರಿಯಾದ ಬೆಲೆ ತೆತ್ತಬೇಕಾಗುತ್ತದೆ. ರಾಜ್ಯದಲ್ಲಿ ಸಾವಿರಾರು ಚಂದ್ರಶೇಖರ್ ಬಂದು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಇನ್ನೊಬ್ಬರ ಬದುಕಿನ ಜೊತೆ ಚೆಲ್ಲಾಟ ಆಡಿದ್ರೆ ತಕ್ಷಣವೇ ನೋವು ಸಿಗಬಹುದು. ಕೋಡಿಹಳ್ಳಿ ಸಣ್ಣತನದ ಪರಮಾವಧಿಗೆ ಬೆಲೆ ಆಗಬಹುದು. ಕೋಡಿಹಳ್ಳಿ ಚಂದ್ರಶೇಖರ್ ನಾಮವಾಶೇಷ ಆಗ್ತೀರಿ ಹುಷಾರ್(!) ಚಂದ್ರ ಶೇಖರ್ ಜಾದೂ ಮಾಡೋಕೆ ಹೋಗಿದ್ದಾನೆ ಅದು ನಡಿಯಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES