Top

ಅವರಿಬ್ಬರ ಜಗಳ ಈಗಾಗಲೇ ಬೀದಿಗೆ ಬಿದ್ದಿದೆ - ನಳೀನ್​ ಕುಮಾರ್ ಕಟೀಲ್​

ಈಗಾಗಲೇ ಅರುಣ್ ಸಿಂಗ್ ಅವರು ಕೂಡ ಮಾತನಾಡಿದ್ದಾರೆ. ಎಲ್ಲರ ಜೊತೆ ಕೂತು ಚರ್ಚೆ ಮಾಡಿ ಎರಡು ದಿನದಲ್ಲಿ ಪರಿಹಾರ ಮಾಡುತ್ತೇವೆ.

ಅವರಿಬ್ಬರ ಜಗಳ ಈಗಾಗಲೇ ಬೀದಿಗೆ ಬಿದ್ದಿದೆ - ನಳೀನ್​ ಕುಮಾರ್ ಕಟೀಲ್​
X

ದಕ್ಷಿಣಕನ್ನಡ: ಈಗಾಗಲೇ ಈಶ್ವರಪ್ಪ ಮತ್ತು ಸಂಬಂಧಪಟ್ಟವರ ಜೊತೆ ಮಾತುಕತೆ ಆಗಿದೆ. ಏನೂ ಸಮಸ್ಯೆ ಆಗದಂತೆ ಪರಿಹಾರ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ

ಸಚಿವ ಈಶ್ವರಪ್ಪರಿಂದ ರಾಜ್ಯಪಾಲರಿಗೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿರಿಯ ನಾಯಕರು ಅವರು, ಹಾಗಾಗಿ ಕುಳಿತು ಚರ್ಚೆ ಮಾಡಬಹುದಿತ್ತು. ನನಗೂ ಪತ್ರ ಬರೆದಿದ್ದಾರೆ, ಅದೇ ಪತ್ರವನ್ನು ಅಲ್ಲಿಗೂ ಕೊಟ್ಡಿದ್ದಾರೆ. ನಮ್ಮ ಮೇಲೆ ವಿಶ್ವಾಸವಿದ್ದೇ ಅವರು ಪತ್ರ ಬರೆದಿದ್ದಾರೆ ಎಂದರು.

ಇನ್ನು ಇದು ಯಾವುದೇ ಗೊಂದಲ ಇಲ್ಲದೇ ಸುಖಾಂತ್ಯವಾಗುತ್ತದೆ. ಈಶ್ವರಪ್ಪನವರ ಪತ್ರದ ಬಳಿಕ ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಪದೇ ಪದೇ ಈ ಬಗ್ಗೆ ಮಾತನಾಡ್ತಿಲ್ಲ, ಈ ಬಾರಿ ಪತ್ರ ಬರೆದಿದ್ದಾರೆ. ಯತ್ನಾಳ್ ಮತ್ತು ಈಶ್ವರಪ್ಪನವರ ವಿಚಾರ ವಿಭಿನ್ನವಾಗಿದೆ. ಈಶ್ವರಪ್ಪನವರು ಸಚಿವರು, ಯತ್ನಾಳ್ ಶಾಸಕರಾಗಿದ್ದು ಅವರಿಗೆ ನೊಟೀಸ್ ಕೊಡಲಾಗಿದೆ ಎಂದಿದ್ದಾರೆ.

ಸದ್ಯ ಈಗಾಗಲೇ ಅರುಣ್ ಸಿಂಗ್ ಅವರು ಕೂಡ ಮಾತನಾಡಿದ್ದಾರೆ. ಎಲ್ಲರ ಜೊತೆ ಕೂತು ಚರ್ಚೆ ಮಾಡಿ ಎರಡು ದಿನದಲ್ಲಿ ಪರಿಹಾರ ಮಾಡುತ್ತೇವೆ. ಯಾವುದೇ ಸಭೆ ಕರೆಯಲ್ಲ, ವೈಯಕ್ತಿಕವಾಗಿ ಮಾತನಾಡ್ತೇವೆ ಎಂದರು.

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಂಘರ್ಷ ಜೋರಿದೆ. ಅವರಿಬ್ಬರ ಜಗಳ ಈಗಾಗಲೇ ಬೀದಿಗೆ ಬಿದ್ದಿದೆ. ಸಿದ್ದರಾಮಯ್ಯ ನಾನೇ ಸಿಎಂ ಅಂತ ಹೇಳಿದ್ರೆ, ಡಿಕೆಶಿ ಅದನ್ನ ವಿರೋಧಿಸಿದ್ದಾರೆ. ಅವರ ಮಧ್ಯೆ ಬೆಂಕಿ ಇರುವಾಗ ನಮ್ಮಲ್ಲಿ ಸಣ್ಣ ಹೊಗೆ ಬರೋದು ಸಹಜವಾಗಿದ್ದು, ಸಿಡಿ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಯಾರ ಹೆಸರನ್ನೂ ಉಲ್ಲೇಖಿಸಲ್ಲ ಎಂದು ನಳೀನ್​ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ.

Next Story

RELATED STORIES