Top

ಸಿದ್ಧರಾಮಯ್ಯ ಮುಂದಿನ ಹತ್ತು ವರ್ಷಗಳ ಕಾಲ ಸಿಎಂ ಆಗುವ ಕನಸು ಬಿಡಬೇಕು - ನಳಿನ್​ ಕುಮಾರ್​ ಕಟೀಲ್​

ಶಿರಾ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ

ಸಿದ್ಧರಾಮಯ್ಯ ಮುಂದಿನ ಹತ್ತು ವರ್ಷಗಳ ಕಾಲ ಸಿಎಂ ಆಗುವ ಕನಸು ಬಿಡಬೇಕು - ನಳಿನ್​ ಕುಮಾರ್​ ಕಟೀಲ್​
X

ದಕ್ಷಿಣಕನ್ನಡ: ವಿಧಾನಪರಿಷತ್ ಚುನಾವಣೆಯಲ್ಲೂ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ನಾಲ್ಕರಲ್ಲಿ ನಾಲ್ಕೂ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ ಮಂಗಳೂರಿನಲ್ಲಿ ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ ಎಂದರು.

ಇನ್ನು ಕೋವಿಡ್ ನಿರ್ವಹಣೆಯ ಸಫಲತೆ ಈ ಫಲಿತಾಂಶದಲ್ಲಿ ಕಂಡಿದೆ. ಸಿಎಂ ಆದ್ಮೇಲೆ ಯಡಿಯೂರಪ್ಪವನರಿಗೆ ಸವಾಲುಗಳು ಎದುರಾದವು. ಎಲ್ಲವನ್ನೂ ಯಶಸ್ವಿ ಆಗಿ ಯಡಿಯೂರಪ್ಪ ನಿರ್ವಹಿಸಿದ್ದಾರೆ. ಕೋವಿಡ್ ನಿಯಂತ್ರಣದಲ್ಲೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ರಾಜ್ಯದ ರಕ್ಷಣೆ ಯಡಿಯೂರಪ್ಪರಿಂದ ಸಾಧ್ಯ ಅಂತ ಜನ ಮನಗಂಡಿದ್ದಾರೆ ಎಂದಿದ್ದಾರೆ.

ಸದ್ಯ ಶಿರಾ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ. ವಿಪಕ್ಷಗಳ ಆರೋಪಗಳೆಲ್ಲಾ ಸುಳ್ಳು ಅಂತಾ ಸಾಬೀತಾಗಿದೆ. ಕಾಂಗ್ರೆಸ್​ನ ಕಪಟ ನಾಟಕ ಅಂತಾ ಜನರಿಗೆ ಗೊತ್ತಾಗಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಕೆಲಸ ಮಾಡಿದೆ. ಶಿರಾದಲ್ಲಿ ಎಲ್ಲರ ಪರಿಶ್ರಮದಿಂದ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡಿದರು. ಕಾಂಗ್ರೆಸ್ ಭ್ರಷ್ಟಾಚಾರದ ಪಾರ್ಟಿ ಅಂತಾ ಸಾಬೀತಾಗಿದೆ. ಆರ್​ಆರ್​ ನಗರ ಶಿರಾದಲ್ಲಿ ಜಾತಿ ರಾಜಕೀಯ ಮಾಡಿದ್ದರು. ಆದರೆ, ಜನ ಇದನ್ನೆಲ್ಲಾ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಕೆಲವರು ಸ್ವಯಂಘೋಷಿತ ನಾಯಕರಾದರು ಎಂದು ಹೇಳಿದರು.

ಉಪಚುನಾವಣೆಯ ಫಲಿತಾಂಶದಿಂದ ಬಂಡೆ ಪುಡಿಯಾಗಿದೆ. ಕಾಂಗ್ರೆಸ್​ನ ಹುಲಿಯಾ ಗೂಡು ಸೇರಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಅಲೆ ಎಲ್ಲಿದೆ ಅಂತಾ ಸಿದ್ಧರಾಮಯ್ಯ ಹೇಳಿದರು. ಈಗ ಹುಲಿಯಾ ಗೂಡು ಸೇರಿದೆ ಅಂತಾ ಜನ ಹೇಳುತ್ತಿದ್ದಾರೆ. ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಕನಸನ್ನು ಬಿಡಬೇಕು. ಮುಂದಿನ ಹತ್ತು ವರ್ಷಗಳ ಕಾಲ ಕನಸನ್ನು ಬಿಡಿ. ಬಾದಾಮಿಯಲ್ಲೂ ಜನ ನಿಮ್ಮನ್ನು ತಿರಸ್ಕಾರ ಮಾಡಲಿದ್ದಾರೆ. ನಿಮ್ಮ ರಾಜಕೀಯ ಭವಿಷ್ಯ ಎಲ್ಲಿ ಅಂತಾ ಮೊದಲು ಯೋಚನೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಳಿನ್​ ಕುಮಾರ್ ಕಟೀಲ್ ಅವರು ಲೇವಡಿ ಮಾಡಿದ್ದಾರೆ.

Next Story

RELATED STORIES