Top

ಪಿಎಂ ಮೋದಿಯಿಂದ 450 ಕಿ.ಮೀ ಉದ್ಧದ ನೈಸರ್ಗಿಕ ಅನಿಲ ಪೈಪ್ ಲೈನ್ ಕಾಮಗಾರಿ ಲೋಕಾರ್ಪಣೆ

ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ

ಪಿಎಂ ಮೋದಿಯಿಂದ 450 ಕಿ.ಮೀ ಉದ್ಧದ ನೈಸರ್ಗಿಕ ಅನಿಲ ಪೈಪ್ ಲೈನ್ ಕಾಮಗಾರಿ ಲೋಕಾರ್ಪಣೆ
X

ದಕ್ಷಿಣಕನ್ನಡ: ದೇಶದ ಮಹತ್ವಾಕಾಂಕ್ಷಿ ಯೋಜನೆಯಾದ ಕೊಚ್ಚಿ ಮಂಗಳೂರು ನೈಸರ್ಗಿಕ ಅನಿಲ ಸರಬರಾಜು ಪ್ರಾಜೆಕ್ಟ್ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಗ್ಯಾಸ್ ಪೈಪ್ಲೈನ್​ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಗೆ ಶುದ್ದ ಇಂಧನ ಸಿಕ್ಕಿದಂತಾಗಿದೆ.

ಕೊಚ್ಚಿ ಮಂಗಳೂರು ನಡುವಿನ ನೈಸರ್ಗಿಕ ಅನಿಲ ಸರಬರಾಜು ಯೋಜನೆ ಇಂದು ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯನ್ನು ಲಾಂಚ್ ಮಾಡಿ. ವಿಡಿಯೋ ಕಾನ್ಫರೆನ್ಸ್ನಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಕೇರಳ-ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಮಂಗಳೂರಿನ ಎಂ.ಸಿ.ಎಫ್​ನಲ್ಲಿ ಅನಿಲ ಸ್ವೀಕರಣಾ ಕೇಂದ್ರವಿದ್ದು ಅದರ ಆವರಣದಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕೇರಳದ ಕೊಚ್ಚಿಯಿಂದ ಕರ್ನಾಟಕದ ಮಂಗಳೂರುವರೆಗೆ 450 ಕಿ.ಮೀ ಉದ್ದ ಈ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗಿದೆ. ಸುಮಾರು 3000 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಪ್ರತಿನಿತ್ಯ 12ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ನೈಸರ್ಗಿಕ ಅನಿಲ ಸಾಗಿಸುವ ಸಾಮರ್ಥ್ಯ ಹೊಂದಿದೆ. ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಎಂಸಿಎಫ್ ಈಗಾಗಲೇ ಈ ನೈಸರ್ಗಿಕ ಅನಿಲದ ಸಂಪರ್ಕವನ್ನು ಹೊಂದಿದ್ದು, ಮುಂದಿನ ಒಂದು ತಿಂಗಳಲ್ಲಿ ಎಂ.ಆರ್.ಪಿಎಲ್ ಮತ್ತು ಒ.ಎಂ.ಪಿ.ಎಲ್ ಕಾರ್ಖಾನೆಗೂ ಗ್ಯಾಸ್ ಸಂಪರ್ಕವಾಗಲಿದೆ. ಈ ಮೂಲಕ ಒಂದೇ ರಾಷ್ಟ್ರ, ಒಂದೇ ಗ್ಯಾಸ್ ಗ್ರಿಡ್ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಈ ಯೋಜನೆಯಿಂದ ಕೇರಳ ಹಾಗೂ ಕರ್ನಾಟಕದ ಮಂಗಳೂರಿನ ಅನಿಲ ಆಧಾರಿತ ಕೈಗಾರಿಕೆಗಳಿಗೆ ಶುದ್ದ ಇಂಧನ ಸಿಗಲಿದೆ. ಗೇಲ್ ಸಂಸ್ಥೆಯೂ ಕಾಮಗಾರಿಯನ್ನು ನಡೆಸುತ್ತಿದ್ದು, ಅನಿಲ ಪೊರೈಕೆ ಮಾಡುತ್ತಿದೆ. ಮುಂದೆ ವಾಹನಗಳಿಗೆ, ಗೃಹ ಬಳಕೆ, ವಾಣಿಜ್ಯ ಬಳಕೆಗು ಲಭಿಸುವಂತೆ ಮಾಡಲಿದೆ. ಇದಕ್ಕಾಗಿ ಸದ್ಯ ನೋಂದಣಿ ನಡೆಯುತ್ತಿದ್ದು ವರ್ಷಾಂತ್ಯದೊಳಗೆ ಮಂಗಳೂರು ನಗರದ ಮನೆ ಮನೆಗಳಿಗೂ ಈ ನೈಸರ್ಗಿಕ ಅಡುಗೆ ಅನಿಲದ ಸಂಪರ್ಕ ಸಿಗಲಿದೆ. ಸದ್ಯ ಎಂ.ಸಿ.ಎಫ್ ತಿಂಗಳಿಗೆ 60 ಕೋಟಿ ರೂಗಳ ಈ ನೈಸರ್ಗಿಕ ಅನಿಲವನ್ನು ಪಡೆಯುತ್ತಿದೆ.

ಈ ನೈಸರ್ಗಿಕ ಅನಿಲವು ಅಧಿಕ ಇಂಧನ ದಕ್ಷತೆ ಹೊಂದಿದೆ ಹಾಗೂ ಪರಿಸರ ಸ್ನೇಹಿಯಾಗಿದೆ. ಕೈಗಾರಿಕೆಗಳಿಗೂ ನಫ್ತಾದಂತ ಇಂಧನಕ್ಕಿಂತ ಕಡಿಮೆ ದರದಲ್ಲಿ ಇದು ಸಿಗಲಿದ್ದು, ಕೈಗಾರಿಕಾ ಉತ್ಪನ್ನಗಳ ಖರ್ಚು ಕಡಿಮೆಯಾಗಿ ಲಾಭದಾಯವಾಗಲಿದೆ. ಒಟ್ಟಿನಲ್ಲಿ ಈ ಪೈಪ್ಲೈನ್ನಿಂದಾಗಿ ಕರಾವಳಿಯ ಉದ್ದಿಮೆಗಳಿಗೆ ಶುದ್ದ ಇಂಧನ ಲಭಿಸಿದಂತಾಗಿದೆ. ಲಕ್ಷಾಂತರ ಮನೆಗಳಿಗೆ ಕಡಿಮೆ ವೆಚ್ಚದ ಅನಿಲ ಪೊರೈಕೆಯಾಗಲಿದೆ.

Next Story

RELATED STORIES