Top

ಸಿನಿಮಾ ನಿರ್ದೇಶಕನ ಮೇಲೆ ಲವ್ ಜಿಹಾದ್ ಮತ್ತು ಮಾಂಸದಂಧೆ ಆರೋಪ

ಮುಂಬೈ ಟು ಭಟ್ಕಳ್​ ಸಿನಿಮಾ ಮೇಲೆ ಲವ್ ಜಿಹಾದ್ ಆರೋಪ

ಸಿನಿಮಾ ನಿರ್ದೇಶಕನ ಮೇಲೆ ಲವ್ ಜಿಹಾದ್ ಮತ್ತು ಮಾಂಸದಂಧೆ ಆರೋಪ
X

ಮಂಗಳೂರು: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಬಂದಿದ್ದ ತಡ, ಕರ್ನಾಟಕದಲ್ಲೂ ಲವ್ ಜಿಹಾದ್ ಕಾನೂನು ತರುವುದಾಗಿ ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ತೀರ್ಮಾನಿಸಲಾಗಿತ್ತು. ಇದನ್ನು ಸ್ವತಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಈ ಬೆನ್ನಲೇ ಈಗ ಮಂಗಳೂರಿನಲ್ಲಿ ಒಂದು ಸಿನಿಮಾ ಭಾರೀ ಚರ್ಚೆಗೆ ಕಾರಣವಾಗಿದೆ. ಅದು ಮುಂಬೈ ಟು ಭಟ್ಕಳ್ ಎಂಬ ಕನ್ನಡ ಸಿನಿಮಾ. ಈ ಸಿನಿಮಾ ಮೂಲಕ ಲವ್ ಜಿಹಾದ್ ಮಾಡಲಾಗುತ್ತಿದೆ ಅಂತಾ ಸಾಮಾಜಿಕ ಜಾತತಾಣದಲ್ಲಿ ಕ್ಯಾಂಪೇನ್ ಮಾಡಲಾಗುತ್ತಿದೆ. ಇನ್ನು ಇದರ ನಿರ್ದೇಶನ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ.

ಭಾರತ ಸೇರಿದಂತೆ ಕರ್ನಾಟಕದಲ್ಲಿ ಲವ್ ಜಿಹಾದ್ ನ ಪರ-ವಿರೋಧದ ಚರ್ಚೆ ಜೋರಾಗಿದೆ. ಈ ಬೆನ್ನಲ್ಲೇ ಲವ್ ಜಿಹಾದ್ ನ ವಿರುದ್ಧ ಕಥಾ ಹಂದರ ಇರುವ ಕನ್ನಡ ಸಿನಿಮಾ ಒಂದನ್ನು ಮಂಗಳೂರು ಮೂಲದವರು ಮಾಡಲು ಹೋರಟಿದ್ದಾರೆ. ಆದ್ರೆ ಈ ಸಿನಿಮಾದ ವಿರುದ್ಧ ಕರಾವಳಿಯಲ್ಲಿ ಲವ್ ಜಿಹಾದ್ ಆರೋಪ ಮಾಡಿ, ಮುಂಬೈ ಟು ಭಟ್ಕಳ್ ಸಿನಿಮಾವನ್ನು ಬ್ಯಾನ್ ಮಾಡಿ ಅಂತಾ ಸಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮಾಡಲಾಗುತ್ತಿದೆ.

ಸದ್ಯ ಈ ಸಿನಿಮಾ ವಿರುದ್ಧ ಮಾತ್ರವಲ್ಲ. ಇದರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗುತ್ತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಹಿಂದು ಯುವತಿಯರನ್ನು ಹಾಕಿಕೊಂಡು ಸಿನಿಮಾ ಮಾಡಿ ಬಳಿಕ ಜಿಹಾದಿಗೆ ಉಪಯೋಗಿಸಿಕೊಂಡಿದ್ದಾರೆ ಅಂತ ಸಮಾಜಿಕ ಜಾತತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲೂ ಕೂಡ ಹಿಂದು ಯುವತಿಗೆ ಬುರ್ಖಾ ಹಾಕಿಸಿದ್ದು ಈ ಸಿನಿಮಾ ಮಾಡಿ ಅದರ ಮೂಲಕ ಲವ್ ಜಿಹಾದ್ ಮಾಡಲು ವ್ಯವಸ್ಥಿತವಾದ ಷಡ್ಯಂತ್ರ ಮಾಡಲಾಗುತ್ತಿದೆ ಅಂತಾ ಆರೋಪಿಸಿದ್ದಾರೆ. ಆದರೆ, ಈ ಎಲ್ಲದರ ಬಗ್ಗೆ ಸಿನಿಮಾ ತಂಡ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆಯನ್ನು ನೀಡಿದೆ. ಇನ್ನು ಈ ಹಿಂದೆ ಇಸ್ಮಾಯಿಲ್ ಮೂಡುಶೆಡ್ಡೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಾಯಕಿಯನ್ನು ಕೂಡ ಪತ್ರಿಕಾಗೋಷ್ಟಿಗೆ ಕರೆಸಲಾಗಿತ್ತು.

ಇನ್ನು ಈ ಸಿಮಾನ ನಟಿ ಕಾವ್ಯ ಅಂಚನ್. ಅವರನ್ನು ಕೂಡ ಈ ಜಾಲದಲ್ಲಿ ಸಿಲುಕಿಸುವ ಯತ್ನ ಆಗುತ್ತಿದೆ ಅಂತಾ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಯಾಸ್ಮಿನ್ ಅಂತಾ ಮತ್ತೊಬ್ಬ ನಟಿಗೆ ಬುರ್ಖಾ ಹಾಕಿಸಿದ್ದಕ್ಕೂ ಕೂಡ ಆಕ್ಷೇಪ ವ್ಯಕ್ತಪಡಿಸಿ ವೈರಲ್ ಮಾಡಲಾಗುತ್ತಿದೆ. ಇನ್ನು ಈ ಬಗ್ಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆ ಹಾಗೂ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 8 ಜನರು ಮೇಲೆ ಎಫ್​ಐಆರ್​ ಕೂಡ ಮಾಡಲಾಗಿದೆ.

ಸದ್ಯ ಈ ಸಿನಿಮಾ ರೀ ರೆಕಾರ್ಡಿಂಗ್ ಹಂತದಲ್ಲಿದೆ. ಇನ್ನು ಇದು ರಿಲೀಸ್ ಆದ್ರೆ ಇದನ್ನು ಬಾಯ್ ಕಟ್ ಮಾಡಿ ಅಂತಾ ದೊಟ್ಟ ಮಟ್ಟದಲ್ಲಿ ಕ್ಯಾಂಪೇನ್ ನಡೀತಾ ಇದೆ. ಆದರೆ, ಈ ಸಿನಿಮಾ ಬಗ್ಗೆ, ನಿರ್ದೇಶಕರ ಮೇಲೆ ಆಗುತ್ತಿರುವ ಅಪಪ್ರಚಾರದ ಬಗ್ಗೆ ತನಿಖೆ ನಡೆದ್ರೆ ಮಾತ್ರ ಇದೆಲ್ಲದರ ಅಸಲಿಯತ್ತು ಬಯಲಾಗುತ್ತೆ.

Next Story

RELATED STORIES