Top

'ಸಿದ್ದರಾಮಯ್ಯನವರು ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ'

ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ತಲವಾರು ಹಿಡಿದು ಗೋಕಳ್ಳತನ ಮಾಡಿದವರ ಬಂಧನ ಮಾಡಿಲ್ಲ, ಇನ್ನು ಗೋ ರಕ್ಷಣೆ ಹೇಗೆ ಮಾಡುತ್ತಾರೆ

ಸಿದ್ದರಾಮಯ್ಯನವರು ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ
X

ದಕ್ಷಿಣಕನ್ನಡ: ಸಿದ್ದರಾಮಯ್ಯನವರು ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಗಣಿ ಎತ್ತಿದ್ದೇನೆ ಅನ್ನುತ್ತಿದ್ದಾರೆ. ಅದರಿಂದ ಏನೂ ಆಗೋದಿಲ್ಲ, ಬದಲಾಗಿ ಗೋವಿನ ಆರಾಧನೆ ಮಾಡಿ. ಸಗಣಿ ಎತ್ತಿ ನಾಟಕ ಮಾಡಿದ್ರೆ ಏನೂ ಪ್ರಯೋಜನ ಇಲ್ಲ ಎಂದರು.

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧದ ಮಸೂದೆ ಮಂಡನೆ ಮಾಡಿದೆ. ಇದೀಗ ಸಿದ್ದರಾಮಯ್ಯನವರು ಚರ್ಚೆ ಮಾಡಬೇಕಿತ್ತು ಅನ್ನುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆದ ಕೆಲವೇ ಗಂಟೆಗಳಲ್ಲಿ, ಹಿಂದೆ ಯಡಿಯೂರಪ್ಪವರು ಮಾಡಿದ್ದ ಗೋಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ಸು ಪಡೆದಿದ್ದರು. ಮಂತ್ರಿ ಮಂಡಲ ಇಲ್ಲದ ಸಂರ್ದಭದಲ್ಲೇ ಏಕಾಂಗಿಯಾಗಿ ಯಾರತರನೂ ಚರ್ಚೆ ಮಾಡದೆ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್​ ಗೋಹತ್ಯೆ ಮಾಡುವವರ ಪರವಾಗಿದ್ದು, ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ತಲವಾರು ಹಿಡಿದು ಗೋಕಳ್ಳತನ ಮಾಡಿದವರ ಬಂಧನ ಮಾಡಿಲ್ಲ, ಇನ್ನು ಗೋ ರಕ್ಷಣೆ ಹೇಗೆ ಮಾಡುತ್ತಾರೆ ಎಂದು ನಳಿನ್​ ಕುಮಾರ್​ ಕಟೀಲ್​ ಅವರು ಪ್ರಶ್ನಿಸಿದರು.

ದೆಹಲಿ ಹಾಗೂ ಬೆಂಗಳೂರಿನಲ್ಲಿ ರೈತರು ಯಾರೂ ಪ್ರತಿಭಟನೆ ಮಾಡುತ್ತಿಲ್ಲ.ರೈತರ ಹೆಸರಿನಲ್ಲಿ ರಾಜಕಾರಣಿಗಳು ಹಾಗೂ ರೈತರ ಹೆಸರಿನಲ್ಲಿ ಜೀವನ ಸಾಗಿಸುವವರು ಪ್ರತಿಭಟಿಸುತ್ತಿರೋದು.ರೈತರನ್ನು ಪ್ರಧಾನಿ ಕರೆದು ಮಾತನಾಡಿದ್ದಾರೆ. ರೈತರಿಗೆ ತೊಂದರೆ ಆಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದರು.

Next Story

RELATED STORIES