Top

'10 ವರ್ಷಕ್ಕೆ ಸೀಮಿತವಾಗೋದು ಬೇಡ ನೂರು ವರ್ಷ ಅವರ ಪಾರ್ಟಿಯೇ ಅಧಿಕಾರದಲ್ಲಿ ಇರಲಿ' - ಡಿಕೆಶಿ

ಮಾನವ ಜೀವಿ ಕೊನೆಯಾಗುವ ವರೆಗೂ ಅವರೇ ಇರಲಿ

10 ವರ್ಷಕ್ಕೆ ಸೀಮಿತವಾಗೋದು ಬೇಡ ನೂರು ವರ್ಷ ಅವರ ಪಾರ್ಟಿಯೇ ಅಧಿಕಾರದಲ್ಲಿ ಇರಲಿ - ಡಿಕೆಶಿ
X

ದಕ್ಷಿಣಕನ್ನಡ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಸೋಲಾಗಿದೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಈ ಬಗ್ಗೆ ನಮಗೆ ಮಾಹಿತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸೋಲಿನ ಕುರಿತು ವ್ಯಾಪಾಕ ಚರ್ಚೆ ಮಾಡುತ್ತೇವೆ. ವಿದ್ಯಾವಂತರು ಕಾಂಗ್ರೆಸ್​ಗೆ ಮತ ಹಾಕಿದ್ದೇವೆ ಎಂದು ಹೇಳಿದ್ದಾರೆ. ಮತದಾರ ಹೇಳಿದ್ದು ತಪ್ಪಿದೆಯಾ(?) ಮತ ಬಿದ್ದಿರೋದು ತಪ್ಪಿದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.

ಇನ್ನು ನಳಿನ್ ಕುಮಾರ್ ಕಟೀಲ್ ಹೇಳೊದೆಲ್ಲಾ ಸುಳ್ಳಿನ ಕಂತೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 10 ವರ್ಷಕ್ಕೆ ಮಾತ್ರ ಅವರು ಸೀಮಿತ ಆಗೋದು ಬೇಡ, ನೂರು ವರ್ಷ ಅವರ ಪಾರ್ಟಿಯೇ ಅಧಿಕಾರದಲ್ಲಿ ಇರಲಿ, ಮಾನವ ಜೀವಿ ಕೊನೆಯಾಗುವ ವರೆಗೂ ಅವರೇ ಇರಲಿ ಎಂದು ಡಿಕೆಶಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಅವರಿಗೆ ಟಾಂಗ್​ ಕೊಟ್ಟಿದ್ದಾರೆ.

ಉಪಚುನಾವಣೆಯ ಫಲಿತಾಂಶದಿಂದ ಬಂಡೆ ಪುಡಿಯಾಗಿದೆ. ಕಾಂಗ್ರೆಸ್​ನ ಹುಲಿಯಾ ಗೂಡು ಸೇರಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಅಲೆ ಎಲ್ಲಿದೆ ಅಂತಾ ಸಿದ್ಧರಾಮಯ್ಯ ಹೇಳಿದರು. ಈಗ ಹುಲಿಯಾ ಗೂಡು ಸೇರಿದೆ ಅಂತಾ ಜನ ಹೇಳುತ್ತಿದ್ದಾರೆ. ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಕನಸನ್ನು ಬಿಡಬೇಕು. ಮುಂದಿನ ಹತ್ತು ವರ್ಷಗಳ ಕಾಲ ಕನಸನ್ನು ಬಿಡಿ. ಬಾದಾಮಿಯಲ್ಲೂ ಜನ ನಿಮ್ಮನ್ನು ತಿರಸ್ಕಾರ ಮಾಡಲಿದ್ದಾರೆ. ನಿಮ್ಮ ರಾಜಕೀಯ ಭವಿಷ್ಯ ಎಲ್ಲಿ ಅಂತಾ ಮೊದಲು ಯೋಚನೆ ಮಾಡಿ ಎಂದು ನಿನ್ನೆ ಮಂಗಳೂರಿನಲ್ಲಿ ಬಿಜೆಪಿ ರಾಜಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಅವರು ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ್ದರು.

Next Story

RELATED STORIES