Top

ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ

ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕಾಂಗ್ರೆಸ್​ ಅಸಮಾಧಾನ ಹೊಂದಿದೆ. ಉದ್ಧವ್​ ಠಾಕ್ರೆ ಕುರ್ಚಿ ಉಳಿಯುವುದೇ ಗೊಂದಲದಲ್ಲಿದೆ.

ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ
X

ದಕ್ಷಿಣಕನ್ನಡ: ಬಸವರಾಜ್ ಪಾಟೀಲ್​ ಯತ್ನಾಳ್ ನಾನು ಅಧ್ಯಕ್ಷನಾಗಿರುವಾಗಲೂ ಇದೇ ರೀತಿಯ ನಡವಳಿಕೆ ತೋರುತ್ತಿದ್ದರು. ಸಂದರ್ಭದಲ್ಲಿ ತಾನೇ ಅವರನ್ನು ಉಚ್ಛಾಟನೆ ಮಾಡಿದ್ದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಹೇಳಿದ್ದಾರೆ.

ಯತ್ನಾಳ್ ನಡವಳಿಕೆ ಬಗ್ಗೆ ಪುತ್ತೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯತ್ನಾಳ್​ಗೆ ಸಚಿವ ಸ್ಥಾನ ಬೇಕಾಗಿದೆ ಅದಕ್ಕಾಗಿ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಅವರನ್ನು ಕರೆದು ಸಮಾಧಾನ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಇಂತಹ ಒತ್ತಡಕ್ಕೆ ಪಕ್ಷ ಸೊಪ್ಪು ಹಾಕುವುದಿಲ್ಲ, ಇನ್ನು ಮುಂದೆ ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕರಾಗಿ ಜನರ ಕಾರ್ಯ ಮಾಡಿ. ವೈಯುಕ್ತಿಕವಾಗಿ ತನಗೆ ಯತ್ನಾಳ್​ ವಿರೋಧಿಯಲ್ಲ. ಯತ್ನಾಳ್​ ಈ ರೀತಿಯ ನಡವಳಿಕೆಯನ್ನು ತಕ್ಷಣವೇ ಬಿಡಬೇಕು. ಪಕ್ಷದ ನಾಯಕರ ವಿರುದ್ಧ ಅಸಮಾಧಾನವಿದ್ದರೆ ನೇರವಾಗಿ ಕೇಂದ್ರ ನಾಯಕರ ಗಮನಕ್ಕೆ ತನ್ನಿ. ರಾಜ್ಯದ ಕೆಲವು ನಾಯಕರು ಈ ರೀತಿ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಬೀದಿ-ಬದಿಗಳಲ್ಲಿ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿಯ ಗಡಿತಂಟೆಗೆ ತೀವೃ ಆಕ್ಷೇಪ. ಕರ್ನಾಟಕದ ನೆಲ-ಜಲ ಉಳಿಸುವ ಜವಾಬ್ದಾರಿ ರಾಜ್ಯ ಸರಕಾರದ್ದು. ತನ್ನ ಸರಕಾರ ಡೋಲಾಯಮಾನ ಸ್ಥಿತಿಯಲ್ಲಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕಾಂಗ್ರೆಸ್​ ಅಸಮಾಧಾನ ಹೊಂದಿದೆ. ಉದ್ಧವ್​ ಠಾಕ್ರೆ ಕುರ್ಚಿ ಉಳಿಯುವುದೇ ಗೊಂದಲದಲ್ಲಿದೆ ಎಂದಿದ್ದಾರೆ.

Next Story

RELATED STORIES