Top

ಮಂಗಳೂರಿನ ವಳಚ್ಚಿಲ್ ಎಕ್ಸ್​ಪರ್ಟ್ ಪಿಯು ಕಾಲೇಜು ವಿರುದ್ಧ ದೂರು ದಾಖಲು

ಸರ್ಕಾರದ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಿದ ಆರೋಪ

ಮಂಗಳೂರಿನ ವಳಚ್ಚಿಲ್ ಎಕ್ಸ್​ಪರ್ಟ್ ಪಿಯು ಕಾಲೇಜು ವಿರುದ್ಧ ದೂರು ದಾಖಲು
X

ಮಂಗಳೂರು: ಸರ್ಕಾರದ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮಂಗಳೂರಿನ ವಳಚ್ಚಿಲ್ ಎಕ್ಸ್​ಪರ್ಟ್ ಪಿಯು ಕಾಲೇಜು ವಿರುದ್ಧ ಪ್ರಕರಣ​ ದಾಖಲಾಗಿದೆ.

ಕಾಲೇಜು ಆಡಳಿ ಮಂಡಳಿ ವಿರುದ್ಧ ಕೊರೊನಾ ನಿಯಮ ಮೀರಿ 30 ಜನ‌ ವಿದ್ಯಾರ್ಥಿಗಳನ್ನು ವಿದ್ಯಾ ಸಂಸ್ಥೆಯಲ್ಲಿ ಇರಿಸಿಕೊಂಡು ತರಗತಿ ನಡೆಸಿದ ಆರೋಪ ಕೇಳಿಬಂದಿದೆ. ಅಲ್ಲದೇ ನಿನ್ನೆ ಪೋಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಕಾಲೇಜಿಗೆ ಬಂದಿದ್ದರು ಸಹ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಕಳಿಸದೇ ತರಗತಿ ನಡೆಸಿದ್ದಾರೆ ಎನ್ನಲಾಗಿದೆ.

ಕಲಂ 5(1), 5(4) ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ನರೇಂದ್ರ ನಾಯಕ್‌ ಮತ್ತು ಆಡಳಿತ ಮಂಡಳಿಯ ವಿರುದ್ಧ ದೂರು ದಾಖಲಾಗಿದೆ.

Next Story

RELATED STORIES