Top

ಆಂಬುಲೆನ್ಸ್​ಗೆ ದಾರಿ ಬಿಡದೇ ಕಾರು ಚಾಲಕನ ಹುಚ್ಚಾಟ

ಕಿಲೋಮೀಟರ್ ಗಟ್ಟಲೇ ಆಂಬುಲೆನ್ಸ್​ಗೆ ಅಡ್ಡವಾಗಿ ಕಾರು ಚಲಾಯಿಸಿ ತೊಂದರೆ ಕೊಟ್ಟ ಕಾರು ಚಾಲಕ

ಆಂಬುಲೆನ್ಸ್​ಗೆ ದಾರಿ ಬಿಡದೇ ಕಾರು ಚಾಲಕನ ಹುಚ್ಚಾಟ
X

ಮಂಗಳೂರು: ಕಾರು ಚಾಲಕ ಆಂಬುಲೆನ್ಸ್​ಗೆ ದಾರಿ ಬಿಡದೇ ತೊಂದರೆ ಕೊಟ್ಟ ಘಟನೆ ನಿನ್ನೆ ಸಂಜೆ ಮಂಗಳೂರಿನ ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.

ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಇರ್ಟಿಗಾ ಕಾರಿನ ಚಾಲಕ ದಾರಿ ಬಿಡದೇ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಕಿಲೋಮೀಟರ್ ಗಟ್ಟಲೇ ಆಂಬುಲೆನ್ಸ್​ಗೆ ಅಡ್ಡವಾಗಿ ಕಾರು ಚಲಾಯಿಸಿ ತೊಂದರೆ ಕೊಟ್ಟ ಕಾರು ಚಾಲಕನ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಹುಚ್ಚಾಟಕ್ಕೆ ಬ್ರೇಕ್​ ಬೀಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

Next Story

RELATED STORIES