Top

ಪೋಟೋಶೂಟ್​ಗಾಗಿ 21 ದಿನಗಳ ಕಾಲ ಕಠಿಣ ವ್ರತ ಮಾಡಿದ ಕ್ರಿಶ್ಚಿಯನ್ ಯುವತಿ

ಈ ಸರಸ್ವತಿ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿಯ ಫೋಟೋಶೂಟ್​ಗಳನ್ನು ಸಾಕಷ್ಟು ಯುವತಿಯರು ಮಹಿಳೆಯರು ಮಾಡಿಸಿಕೊಳ್ಳುತ್ತಾರೆ.

ಪೋಟೋಶೂಟ್​ಗಾಗಿ 21 ದಿನಗಳ ಕಾಲ ಕಠಿಣ ವ್ರತ ಮಾಡಿದ ಕ್ರಿಶ್ಚಿಯನ್ ಯುವತಿ
X

ದಕ್ಷಿಣಕನ್ನಡ: ಮಂಗಳೂರು ದಸರಾ ಅಂದ್ರೆ ಎಲ್ಲರಿಗೂ ಥಟ್ಟಂತ ನೆನಪಿಗೆ ಬರುವುದು ದೇವಿ ಸರಸ್ವತಿ ವಿಗ್ರಹ. ಪ್ರತಿವರ್ಷ ಮಂಗಳೂರಿನ ದಸರಾದಲ್ಲಿ ನವದುರ್ಗೆಯರ ಜೊತೆ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಸರಸ್ವತಿ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿಯ ಫೋಟೋಶೂಟ್​ಗಳನ್ನು ಸಾಕಷ್ಟು ಯುವತಿಯರು ಮಹಿಳೆಯರು ಮಾಡಿಸಿಕೊಳ್ಳುತ್ತಾರೆ. ಈ ವರ್ಷದ ವಿಶೇಷ ಅಂದ್ರೆ ಓರ್ವ ಕ್ರಿಶ್ಚಿಯನ್ ಸಮುದಾಯದ ಯುವತಿ ಫೋಟೋಶೂಟ್ ಭಾಗವಹಿಸಿದ್ದಾರೆ.

ಮಂಗಳೂರು ದಸರಾ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುವ ಕರಾವಳಿಯ ದಸರಾ. ಇತರ ಹಲವಾರು ಐತಿಹ್ಯ ಮತ್ತು ವೈಭವಗಳನ್ನು ಹೊಂದಿದೆ. ಮಂಗಳೂರು ದಸರಾದಲ್ಲಿ ಹುಲಿವೇಷ ಸೇರಿದಂತೆ ಸಾಕಷ್ಟು ಟ್ಯಾಬ್ಲೋಗಳ ಮೂಲಕ ಪ್ರತಿವರ್ಷ ಜನರನ್ನು ರಂಜಿಸುವ ಕಾರ್ಯಕ್ರಮಗಳು ಇರುತ್ತಿತ್ತು. ಅದರ ಜೊತೆಗೆ ಸಾಕಷ್ಟು ಜನರು ಈ ಒಂದು ದಸರಾಕ್ಕೆ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ವರ್ಷ ಲಾಕ್​ಡೌನ್​ನಿಂದ ಸರಳ ದಸರಾ ಆಚರಿಸಿದ್ದರಿಂದ ಈ ಎಲ್ಲಾ ಸಂಭ್ರಮ ಗಳಿಗೆ ಕೊಂಚ ಬ್ರೇಕ್ ಬಿದ್ದಿತ್ತು. ಇದಿಷ್ಟೇ ಅಲ್ಲ ದಸರಾದಲ್ಲಿ ಪ್ರಮುಖ ಭಾಗ ಅಂದರೆ ಅದು ಗಣಪತಿ, ನವದುರ್ಗೆಯರು ಮತ್ತು ಸರಸ್ವತಿ ಮೂರ್ತಿ. ಕುದ್ರೋಳಿ ದೇವಸ್ಥಾನದ ಸಭಾಭವನದ ಆವರಣದಲ್ಲಿರುವ ಸಭಾಭವನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳು ಅದೆಷ್ಟು ಸುಂದರ ಮತ್ತು ಮನಮೋಹಕ ಅಂದರೆ ಅದನ್ನು ನೋಡಿದವರು ವಾವ್ ಅನ್ನದೇ ಇರಲಾರರು. ನವದುರ್ಗೆಯರನ್ನು ಪ್ರಮುಖವಾಗಿ ಸರಸ್ವತಿ ವಿಗ್ರಹ ಅತ್ಯಕರ್ಷಣೆಯಾಗಿರುತ್ತದೆ.

ಪ್ರತಿವರ್ಷ ವರ್ಷಕ್ಕೂ ಕೊಂಚ ವಿಭಿನ್ನ ಶೈಲಿಯಲ್ಲಿ ಮೂಡಿಬರುವ ಸರಸ್ವತಿ ಮೂರ್ತಿ ಸಾಕ್ಷಾತ್ ಸರಸ್ವತಿಯೇ ಧರೆಗಿಳಿದುಬಂದಂತೆ ಕಾಣುತ್ತಿತ್ತು. ಇದಷ್ಟು ಫೇಮಸ್ ಆಗಿದೆ ಅಂದ್ರೆ ಇದೇ ರೀತಿಯ ವೇಷ ಧರಿಸಿ ಫೋಟೊ ಶೂಟ್ ನ್ನು ಯುವತಿಯರು ಮತ್ತು ಮಹಿಳೆಯರು ಮಾಡಿಸಿಕೊಳ್ಳುತ್ತಿದ್ದಾರೆ. ದೇವಿಯ ಮುಡಿಯಲ್ಲಿ ಯಾವ ರೀತಿ ಮಲ್ಲಿಗೆ ಗುಚ್ಚ ಇರುತ್ತದೆ, ಕೈಯಲ್ಲಿನ ವೀಣೆ, ಇದೆಲ್ಲವನ್ನು ಅಲಂಕಾರ ಮಾಡಿಕೊಂಡು ಥೇಟ್ ಮೂರ್ತಿಯ ಹಾಗೆ ಅಲಂಕಾರ ಮಾಡಿಕೊಂಡು ಫೋಟೊಗೆ ಪೋಸ್ ಕೊಡುತ್ತಾರೆ.

ಇನ್ನು ದೇವಿಯ ಫೋಟೊ ಇನ್ನು ಹೆಚ್ಚು ವೈರಲ್ ಆಗೋದು ವಿಸರ್ಜನೆಯ ಫೋಟೊಗಳಿಂದಾಗಿ ಆಗುತ್ತದೆ. ಹೌದು ವಿಸರ್ಜನೆ ವೇಳೆ ಸರಸ್ವತಿ ಮೂರ್ತಿ ಮುಳುಗುವಾಗ ಕ್ಲಿಕ್ ಮಾಡಿದ ಫೋಟೊ ಮಾಧರಿಯಲ್ಲಿ ಯುವತಿಯರು ಮತ್ತು ಮಹಿಳೆಯರು ನೀರಿನಲ್ಲಿ ಮುಳುಗಿ ಫೋಟೊಗೆ ಪೋಸ್ ನೀಡುತ್ತಾರೆ. ಇನ್ನು ಈ ಭಾರೀ ಮಂಗಳೂರಿನ ಪಾತ್ ವೇ ಮತ್ತು ಮರ್ಸಿ ಸಲೂನ್ ಆಯೋಜಿಸಿದ್ದ ಶ್ಯಾಡೋ ಆಫ್ ನವದುರ್ಗಕ್ಕೆ ರೂಪದರ್ಶಿಯರನ್ನು ಹುಡುಕುತ್ತಿದ್ದರು. ಆಗ ಸರಸ್ಪತಿ ಮೂರ್ತಿಯ ತೂಪದರ್ಶಿಯಾಗಿ ಮಂಗಳೂರಿನ ಕುಲಶೇಖರ ನಿವಾಸಿಯಾದ ಅನೀಶಾ ಅಂಜಲಿನ್ ಮೋಂತೇರೊ ಸೆಲೆಕ್ಟ್ ಆಗಿದರು.

ಈ ಶೂಟಿಂಗ್​ಗಾಗಿ ಸರಸ್ವತಿ ಮೂರ್ತಿಯ ರೂಪದರ್ಶಿಯಾಗಿ ಓರ್ವ ಕ್ರಿಸ್ಚಿಯನ್ ಯುವತಿ ಬಣ್ಣ ಹಚ್ಚಿದ್ದಳು. ಆದರೆ, ತನ್ನ ಧರ್ಮವಲ್ಲದ ಇಲ್ಲಿ ಈ ಕಾರ್ಯ ಮಾಡಲು ಆಕೆ ನಿಷ್ಠೆಯಿಂದ ತಯಾರಾಗಿದ್ದಳು. 21 ದಿನ ಕಾಲ ಕಠಿಣ ವ್ರತ ಮಾಡಿ ಮಾಂಸಹಾರ ವರ್ಜಿಸಿದ್ದಳು. ಹೀಗೆ ಸಂಪೂರ್ಣ ಸಸ್ಯಹಾರ ಅದರಲ್ಲೂ ಪಥ್ಯಹಾರ ಸೇವಿಸಿ ನಂತರ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದಳು.

ಇನ್ನು ಈ ಫೋಟೊಗಳನ್ನು ವರ್ಷಿಲ್ ಅಂಚನ್ ಸೆರೆಹಿಡಿದ್ದಾರೆ. ಇದೇ ರೀತಿ ಫೋಟೊ ಶೂಟ್ ಮಾಡಿದ್ದ ಹಲವು ಯುವತಿರು ಭಕ್ತವೃಂಧದಿಂದ ಟೀಕೆಗೆ ಗುರಿಯಾಗಿದ್ದರು. ಆದ್ರೆ ಮೋನಿಶಾಳ ಈ ವ್ರತ ನಿಷ್ಠೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಇದು ಕಾರಣವಾಗಿದೆ.

Next Story

RELATED STORIES