Top

ವ್ಯಾಕ್ಸಿನ್​ ಆತಂಕ ದೂರ ಮಾಡಿದ ಬೈನೇಹಳ್ಳಿ ಪಿಡಿಓ:ಕೊನೆಗೂ ಲಸಿಕೆ ಪಡೆದ ಗ್ರಾಮಸ್ಥರು

ಪಿಡಿಓ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ವ್ಯಾಕ್ಸಿನ್​ ಆತಂಕ ದೂರ ಮಾಡಿದ ಬೈನೇಹಳ್ಳಿ ಪಿಡಿಓ:ಕೊನೆಗೂ ಲಸಿಕೆ ಪಡೆದ ಗ್ರಾಮಸ್ಥರು
X

ಕೋಲಾರ: ಕೊರೊನಾ ಲಸಿಕೆ ಬಗ್ಗೆ ಜನರಿಗೆ ಅನೇಕ ರೀತಿ ಪೂರ್ವಗ್ರಹಗಳಿವೆ. ವ್ಯಾಕ್ಸಿನ್​ ಪಡೆದರೆ ಬೇರೆ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೆಚ್ಚಿನ ಜನರು ಲಸಿಕೆ ಪಡೆಯದೇ ದೂರ ಉಳಿದಿದ್ದಾರೆ.

ಇದೇ ರೀತಿ ಕೆಜಿಎಫ್​​ನ ಬೈನೇಹಳ್ಳಿ ಗ್ರಾಮಸ್ಥರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಗ್ರಾಮ ಪಂಚಾಯ್ತಿ ಪಿಡಿಓ ಜನರಿಗೆ ಧೈರ್ಯ ತುಂಬಿ, ಲಸಿಕೆಯ ಉಪಯೋಗಳನ್ನು ತಿಳಿಸಿ, ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ.

ಪಿಡಿಓ ಯಶವಂತ್ ಅವರು ನೀಡಿದ ಮಾಹಿತಿ ಪಡೆದ ಗ್ರಾಮಸ್ಥರು ಇದೀಗ ಧೈರ್ಯದಿಂದ ಲಸಿಕೆ ಪಡೆಯಲು ಮುಂದೆ ಬಂದಿದ್ದಾರೆ. ಅಲ್ಲದೇ ಮನೆಯಲ್ಲಿರುವ ವಯಸ್ಸಾದ ತಂದೆ-ತಾಯಿಯರಿಗೂ ಲಸಿಕೆ ಹಾಕಿಸಿದ್ದಾರೆ. ಕೊರೊನಾ ಸೋಂಕಿನಿಂದ ಪಾರಾಗಲು ಲಸಿಕೆಯೊಂದೇ ಮಾರ್ಗವಾಗಿದ್ದು, ಗ್ರಾಮಸ್ಥರು ಅದರ ಸದುಪಯೋಗ ಪಡೆಯುವಲ್ಲಿ ಶ್ರಮವಹಿಸಿದ ಪಿಡಿಓ ಯಶವಂತ್ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Next Story

RELATED STORIES