ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ (64) ಆತ್ಮಹತ್ಯೆ!
ಎಸ್.ಎಲ್ ಧರ್ಮೇಗೌಡ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.

ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ (64) ಅವರ ಮೃತದೇಹ ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿಯ ಇರುವ ರೈಲು ಹಳಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿಲಾಗಿದೆ.
ಸಖರಾಯಪಟ್ಟಣದ ಬಳಿಯ ತೋಟದ ಮನೆಯಿಂದ ನಿನ್ನೆ ಸಂಜೆ ಕಾರಿನಲ್ಲಿ ತೆರಳಿದ್ದ ಎಸ್.ಎಲ್ ಧರ್ಮೇಗೌಡ ಅವರು ಹಿಂದಿರುಗಿರಲಿಲ್ಲ. ರಾತ್ರಿಯಾದರೂ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಡಿದ್ದಾರೆ. ಗುಣಸಾಗರ ಕಬ್ಳಿ ಮಾರ್ಗದ ಮಧ್ಯೆ ರಾತ್ರಿ ಪತ್ತೆ ಮೃತದೇಹ ಪತ್ತೆಯಾಗಿದೆ.
ಧರ್ಮೇಗೌಡ ಅವರಿಗೆ ಪತ್ನಿ ಮಮತಾ, ಪುತ್ರ ಸೋನಲ್, ಪುತ್ರಿ ಸಲೋನಿ ಇದ್ದಾರೆ.
ಎಸ್.ಎಲ್ ಧರ್ಮೇಗೌಡ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.
ಡೇತ್ ನೋಟ್ ಬರೆದು ಆತ್ಮಹತ್ಯೆ
ಮರಣ ಪತ್ರದಲ್ಲಿ ವಿಧಾನ ಪರಿಷತ್ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ, ಅರ್ಧಕ್ಕೆ ನಿಂತಿರುವ ಮನೆಯನ್ನು ಪೂರ್ಣಗೊಳಿಸುವಂತೆ, ಹಣಕಾಸು ವಿಚಾರಗಳ ಮಾಹಿತಿ ನೀಡಿ ತಮ್ಮ ಈ ಕೃತ್ಯವನ್ನು ಕ್ಷಮಿಸುವಂತೆ ಕೋರಿದ್ದಾರೆ.
ನಿನ್ನೆ ಇಡೀದಿನ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಯುವಜನೋತ್ಸವ ಮತ್ತು ಆಧುನಿಕೃತ ಜಿಮ್ನ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಬಹು ಲವಲವಿಕೆಯಿಂದಲೇ ಭಾಗವಹಿಸಿ ಸೋಮವಾರ ನಾಲ್ಕು ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸನ್ನು ಗಟ್ಟಿ ಮಾಡಿಕೊಂಡ ಧರ್ಮೆಗೌಡ ಸಕರಾಯಪಟ್ಟಣದ ತಮ್ಮ ತೋಟದ ಮನೆಗೆ ತೆರಳಿ ಅಲ್ಲಿಂದ ಬಾಣವಾರಕ್ಕೆ ತೆರಳಿ ಡೆತ್ ನೋಟನ್ನು ಸಿದ್ದಪಡಿಸಿಕೊಂಡು ಜೊತೆಯಲ್ಲಿದ್ದ ಆಪ್ತ ಸಹಾಯಕ ಮತ್ತು ಬೆಂಗಾವಲು ಪಡೆಯ ಸಿಬ್ಬಂದಿಗೆ ಖಾಸಗಿ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದರು.
ಖಾಸಗಿ ಸ್ಯಾಂಟ್ರೋ ಕಾರಿನಲ್ಲಿತೆರಳಿದ ಧರ್ಮೇಗೌಡ ಕಡೂರಿನ ಗುಣಸಾಗರದ ಬಳಿ ಬಂದ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ.
ತೆರಳಿ ಸುಮಾರು ಸಮಯ ಕಳೆದರೂ ಬಾರದ ಧರ್ಮೇಗೌಡ ರ ಬಗ್ಗೆ ಆತಂಕಗೊಂಡ ಸಿಬ್ಬಂದಿ ಮೊಬೈಲ್ಗೆ ಕರೆ ಮಾಡಿದ ಸಂದರ್ಭದಲ್ಲಿ ಸ್ವಿಚ್ ಆಫ್ ಆಗಿತ್ತು.ಇದರಿಂದವಿಚಲಿತರಾಗಿ ಹುಡುಕಾಟ ಶುರುಮಾಡಿದಾಗ ಸರಿ ರಾತ್ರಿ ಒಂದು ಗಂಟೆ ಸಮಯದಲ್ಲಿ ಗುಣಸಾಗರದ ಹತ್ತಿರದ ರೈಲ್ವೇ ಹಳಿಯ ಹತ್ತಿರ ದೇಹ ಮೂರು ತುಂಡಾದ ಸ್ಥಿತಿಯಲ್ಲಿ ಛಿದ್ರ ವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಸಿ.ಟಿ ರವಿ, ಬೆಳ್ಳಿ ಪ್ರಕಾಶ್, ಸ್ಥಳೀಯ ಮುಖಂಡರು,ಪೋಲೀಸ್ ವರಿಷ್ಟಾಧಿಕಾರಿ ಅಕ್ಷಯ್,ಜಿಲ್ಲಾಧಿಕಾರಿ ಬಗಾದಿ ಗೌತಮ್, ಭೇಟಿ ನೀಡಿ ಪರಿಶೀಲಿಸಿದರು.