Top

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ :ಪೆಟ್ರೋಲ್​​ನಲ್ಲೇ ಕೈ ಕಾರ್ಯಕರ್ತರ ಸ್ನಾನ

ಮೈ ಮೇಲೆ ಪೆಟ್ರೋಲ್​ ಸುರಿದುಕೊಂಡು ಪ್ರತಿಭಟನಾಕಾರರ ಆಕ್ರೋಶ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ :ಪೆಟ್ರೋಲ್​​ನಲ್ಲೇ ಕೈ ಕಾರ್ಯಕರ್ತರ ಸ್ನಾನ
X

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಪಿಸಿಸಿ ಕಿಸಾನ್ ಘಟಕ ಕಾರ್ಯಕರ್ತರು ದೇಶದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪೆಟ್ರೋಲ್​​ನಲ್ಲೇ ಸ್ನಾನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಿ.ಎನ್.ಅಕ್ಮಲ್ ನೇತೃತ್ವದ ಕಿಸಾನ್ ಘಟಕ ಕಾರ್ಯಕರ್ತರು ನಗರದ ಹನುಮಂತಪ್ಪ ಸರ್ಕಲ್​ ಬಳಿಯಿರುವ ಪೆಟ್ರೋಲ್​​ ಬಂಕ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ೨೦ ಲೀಟರ್ ಪೆಟ್ರೋಲ್​ನ್ನು ಹೊರಗೆ ಚೆಲ್ಲಿ, ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಇನ್ನು ಚಿತ್ರದುರ್ಗದಲ್ಲೂ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮೈ ಮೇಲೆ ಪೆಟ್ರೋಲ್​ ಸುರಿದುಕೊಂಡು ಕೇಂದ್ರ ಸರ್ಕಾರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

Next Story

RELATED STORIES