Top

ಕಷ್ಟಪಟ್ಟು ಗಳಿಸಿದ ಹೆಸರು ಕ್ಷಣಾರ್ಧದಲ್ಲಿ ಹಾಳಾಗುತ್ತೆ - ಸಚಿವ ಡಾ. ಕೆ. ಸುಧಾಕರ್

ಕಷ್ಟಪಟ್ಟು ಗಳಿಸಿದ ಹೆಸರು ಕ್ಷಣಾರ್ಧದಲ್ಲಿ ಹಾಳಾಗುತ್ತೆ - ಸಚಿವ ಡಾ. ಕೆ. ಸುಧಾಕರ್
X

ಚಿಕ್ಕಬಳ್ಳಾಪು: ನಟ-ನಟಿಯರನ್ನು ಅವರ ಅಭಿಮಾನಿಗಳು ಅನುಕರಿಸುತ್ತಾರೆ, ಸಾರ್ವಜನಿಕ ಜೀವನದಲ್ಲಿ ಇರುವವರು ಶುದ್ಧವಾಗಿದ್ರೆ ಒಳಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಶುಕ್ರವಾರ ಹೇಳಿದ್ದಾರೆ.

ಸಿಸಿಬಿ ಅಧಿಕಾರಿಗಳು ಚಿತ್ರನಟಿ ರಾಗಿಣಿ ವಿಚಾರಣೆ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಟ-ನಟಿಯರು ಡ್ರಗ್ಸ್ ವ್ಯಸನಿಗಳಾದ್ರೆ ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತೆ. ಕಷ್ಟಪಟ್ಟು ಗಳಿಸಿದ ಹೆಸರು ಕ್ಷಣಾರ್ಧದಲ್ಲಿ ಹಾಳಾಗುತ್ತೆ ಎಂದರು.

ನಾನು ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ, ಜನಪ್ರತಿನಿಧಿಗಳು ಹಾಗೂ ನಟ-ನಟಿಯರು ರಾಯಭಾರಿಗಳಾಗಿರಬೇಕು. ಸಮಾಜದಲ್ಲಿ ರಾಯಭಾರಿಗಳ ತರ ಇರಬೇಕು. ಇವರನ್ನು ನೋಡಿ ಬಹಳ ಜನ ಜೀವನದಲ್ಲಿ ಬದಲಾಗ್ತಾರೆ. ನಾವೇ ಮಾದಕ ವಸ್ತುಗಳನ್ನು ಸೇವಿಸಿ ತಪ್ಪು ಮಾಡಬಾರದು. ನಾವು ತಪ್ಪು ಸಂದೇಶವನ್ನ ಜನರಿಗೆ ಕೊಡುವಂತಾಗ್ತೀರಿ ಎಂದಿದ್ದಾರೆ.

ಸದ್ಯ ಇದ್ರಿಂದ ಸಮಾಜದಲ್ಲಿ ಗಳಿಸಿದ ಹೆಸರು ಮಣ್ಣುಪಾಲಾಗುತ್ತೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡವರಿಗೆ ಇದು ಅನ್ವಯವಾಗುತ್ತೆ. ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ. ಬೇರೆ ಬೇರೆ ದೇಶಗಳಲ್ಲಿ ಇದೊಂದು ದೊಡ್ಡ ಮಾಫಿಯಾ. ಹೀಗಾಗಿ ರಾಜ್ಯದಲ್ಲಿ ಮಾದಕವಸ್ತುಗಳ ನಿಗ್ರಹಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾನು ಈಗಾಗಲೇ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಸರ್ಕಾರ ಈ ಚಟುವಟಿಕೆಗೆಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಹೇಳಿದ್ದಾರೆ.

Next Story

RELATED STORIES