Top

ದೊಡ್ಡಬಳ್ಳಾಪುರ ಕರಗದಲ್ಲಿ ಕೊರೊನಾ ರೂಲ್ಸ್​ಗೆ ಡೋಂಟ್​ಕೇರ್​​

ಸಾಮಾಜಿಕ ಅಂತರ ಕಾಪಾಡದೇ ನೂರಾರು ಮಂದಿ ಕರಗದಲ್ಲಿ ಭಾಗಿ

ದೊಡ್ಡಬಳ್ಳಾಪುರ ಕರಗದಲ್ಲಿ ಕೊರೊನಾ ರೂಲ್ಸ್​ಗೆ ಡೋಂಟ್​ಕೇರ್​​
X

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಲ್ಲಿದ್ದರೂ ಸಹ, ದೊಡ್ಡಬಳ್ಳಾಪುರದ ಜನರು ಮಾತ್ರ ಕ್ಯಾರೇ ಎನ್ನದೇ ಅದ್ಧೂರಿಯಾಗಿ ಕರಗ ಉತ್ಸವ ಆಚರಿಸಿದ್ದಾರೆ.

ನಿನ್ನೆ ರಾತ್ರಿ ದೊಡ್ಡಬಳ್ಳಾಪುರ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ಧೂರಿಯಾಗಿ ಕರಗ ಉತ್ಸವ ನಡೆದಿದೆ. ಕೊರೊನಾ ರೂಲ್ಸ್​ಗಳನ್ನು ಗಾಳಿಗೆ ತೂರಿ ಕರಗದಲ್ಲಿ ನೂರಾರು ಮಂದಿ ಭಾಗಿಯಾಗಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಿಜೃಂಭಣೆಯಿಂದ ದೊಡ್ಡಬಳ್ಳಾಪುರದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆದಿದೆ.

ಇನ್ನು ಪೊಲೀಸರು ಕೂಡ ಕರಗದಲ್ಲಿದ್ದು, ಜನ ಗುಂಪು ಗೂಡಿರುವುದನ್ನು ಎಚ್ಚರಿಸದೇ ತಾವೇ ಸುಮ್ಮನೇ ಜನರ ಮಧ್ಯೆ ಕರಗ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ.

Next Story

RELATED STORIES