Top

ಬಿಆರ್​ಟಿಯಲ್ಲಿ ಪ್ರವಾಸಿಗರ ಮೇಲೆ ಕಣ್ಣಿಡಲು ಟೈಗರ್ ರಿಸರ್ವ್ ಆ್ಯಪ್​

ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಈ ಆಪ್ ಸಹಾಯಕ

ಬಿಆರ್​ಟಿಯಲ್ಲಿ ಪ್ರವಾಸಿಗರ ಮೇಲೆ ಕಣ್ಣಿಡಲು ಟೈಗರ್ ರಿಸರ್ವ್ ಆ್ಯಪ್​
X

ಚಾಮರಾಜನಗರ: ಬಿಳಿಗಿರಿ ರಂಗನಬೆಟ್ಟ ವಿಸ್ತಾರವಾದ ಅರಣ್ಯ ಸಂಪತ್ತನ್ನು ಹೊಂದಿರುವ ಅಭಯಾರಣ್ಯ. ವೈವಿಧ್ಯಮಯ ಜೀವ ಸಂಕುಲವನ್ನೇ ತನ್ನ ಒಡಲೊಳಗಿಟ್ಟುಕೊಂಡಿದೆ. ಆದರೆ, ಪ್ರವಾಸಿಗರಿಂದ ಇತ್ತಿಚೇಗೆ ವನ್ಯಜೀವಿ ಸಂಕುಲಕ್ಕೆ ಹಾನಿಯಾಗ್ತಿರೋ ಹಿನ್ನಲೆ ಪ್ರವಾಸಿಗರ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಪ್ಲಾನ್ ಮಾಡಿದೆ. ಹೊಸ ಆಪ್ ಸಿದ್ದಪಡಿಸಿದ್ದು ಆ ಮೂಲಕ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದೆ.

ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಸೌಂದರ್ಯ ಸವಿಯಲು ಪ್ರತಿನಿತ್ಯ ನೂರಾರು ಜನ ಆಗಮಿಸ್ತಾರೆ.. ಜೊತೆಗೆ ಈ ಮೀಸಲು ಪ್ರದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನ್ರು ಹಾದುಹೊಗ್ತಾರೆ.. ಆದ್ರೆ ಕೆಲವು ಪ್ರವಾಸಿಗರು ಹಾಗೂ ವಾಹನ ಸಂಚಾರಿಗಳು ಅರಣ್ಯ ಹಾಗೂ ವನ್ಯಜೀವಿಗಳಿಗೆ ಹಾನಿ ಮಾಡ್ತಿರೋ ಹಿನ್ನಲೆ ಅವ್ರ ಮೇಲೆ ಕಣ್ಣಿಡಲು ಬಿಆರ್ ಟಿ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಪ್ಲಾನ್ ಮಾಡಿದೆ. ಟೈಗರ್ ರಿಸರ್ವ್ ಆಪ್ ಅಭಿವೃದ್ದಿ ಪಡಿಸಿದ್ದು ಇದು ಪ್ರವಾಸಿಗರ ಮೇಲೆ ಕಣ್ಣಿಡಲು ಸಹಕಾರಿಯಾಗಿದೆ.

ಇನ್ನೂ ಬಿಳಿಗಿರಿ ರಂಗನಬೆಟ್ಟಕ್ಕೆ ಪ್ರವೇಶಿಸುವವ ಪ್ರತಿ ವಾಹನಕ್ಕೆ ಟೋಕನ್ ವ್ಯವಸ್ಥೆ ಕಡ್ಡಾಯವವಾಗಿದೆ. ಅರಣ್ಯ ಮೀಸಲು ಪ್ರದೇಶ ಎಂಟ್ರಿಗೂ ಮುನ್ನ ಪ್ರತಿ ವಾಹನಕ್ಕೆ ಒಂದು ಎಲೆಕ್ಟ್ರಾನಿಕ್ ಟೋಕನ್ ನೀಡಲಾಗುತ್ತೆ. ಎಂಟ್ರಿ ಸಂದರ್ಭ ನೀಡಲಾಗುವ ಟೋಕನ್ ಟೋಕನ್ ಎಕ್ಸಿಟ್ ಸಂದರ್ಭ ಸ್ಕ್ಯಾನ್ ಮಾಡಲಾಗುತ್ತೆ. ಅರಣ್ಯ ಸಂಪನ್ಮೂಲ ಕಳ್ಳತನ, ಅತಿಕ್ರಮ ಅರಣ್ಯ ಪ್ರವೇಶ ತಡೆಯಲು ಈ ಆಪ್ ಸಿದ್ದಪಡಿಸಲಾಗಿದೆ.

ಅರಣ್ಯ ಮೀಸಲು ಪ್ರದೇಶದಿಂದ ಹಾದು ಹೋಗುವ ದಾರಿಯಲ್ಲಿ ಅನೇಕ ಕೃತ್ಯಗಳು ನಡಿತಿವೆ. ಹೀಗಾಗಿ ಟೈಗರ್ ರಿಸರ್ವ್ ಆಪ್ ಅಭಿವೃದ್ದಿ ಪಡಿಸಲಾಗಿದ್ದು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಅರಣ್ಯ ಪ್ರದೇಶದಲ್ಲಿಯೇ ಇರುವ ಹಾಗೂ ಸಂಜೆಯಾದ್ರೂ ಅರಣ್ಯ ಪ್ರದೇಶದಿಂದ ಹೊರ ಹೋಗದ ವಾಹನ ಪತ್ತೆ ಹಚ್ಚಲು ಈ ಆಪ್ ಸಹಾಯಕವಾಗಿದೆ ಅಂತಾರೆ ಅಧಿಕಾರಿಗಳು.

ವನ್ಯ ಜೀವಿ ಹಾಗೂ ಅರಣ್ಯ ಸಂರಕ್ಷಣೆ ಈ ಆಪ್ ಸಹಾಯಕವಾಗಿದ್ದು ಕಳೆದ 5 ದಿನಗಳಿಂದ ಕಾರ್ಯನಿರ್ವಹಿಸ್ತಿದೆ.. ಬಿ ಆರ್ ಟಿ ಅರಣ್ಯ ಇಲಾಖೆ ಸಿದ್ದಪಡಿಸಿರೋ ಆಪ್​ಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು ಅಕ್ರಮ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಡಲು ಸಹಕಾರಿಯಾಗಿದೆ.

Next Story

RELATED STORIES