Top

ಇದು ಮರ್ಡರ್​ ಒಂದು ವಾರದಲ್ಲಿ ಪ್ರಕರಣದ ತನಿಖೆಯಾಗಬೇಕು - ಡಿ.ಕೆ ಶಿವಕುಮಾರ್

ಕ್ರಾಸ್ ಚೆಕ್ ಮಾಡಿದ ನಂತರ 14 + 07 + 03 = 24 ಜನರು ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದ್ದಾರೆ

ಇದು ಮರ್ಡರ್​ ಒಂದು ವಾರದಲ್ಲಿ ಪ್ರಕರಣದ ತನಿಖೆಯಾಗಬೇಕು - ಡಿ.ಕೆ ಶಿವಕುಮಾರ್
X

ಚಾಮರಾಜನಗರ: 24 + 4, 28 ಜನ ಸಾವನ್ನಪ್ಪಿರುವುದಕ್ಕೆ ದಾಖಲೆಯಿದೆ. ದಾಖಲೆಯಲ್ಲಿ ಕೇವಲ 24 ಜನರ ಮಾಹಿತಿ. ನಾವು ಎಲ್ಲಾ ಮಾಹಿತಿಯನ್ನು ತೆಗೆದುಕೊಂಡಿದ್ದೇವೆ. ಸಾವನ್ನಪ್ಪಿರುವುದು 28 ಜನರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್​ ನಾಯಕರು ಅಲ್ಲಿನ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಮಾಹಿತಿ ಕಲೆಹಾಕಿದರು ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಕ್ರಾಸ್ ಚೆಕ್ ಮಾಡಿದ ನಂತರ 14 + 07 + 03 = 24 ಜನರು ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.

ಇನ್ನು ಸ್ಥಳೀಯ ಶಾಸಕರು ಸಿಎಸ್​ಗೆ ನೇರ ಮಾತನಾಡಿದ್ದಾರೆ. ತನಿಖಾಧಿಕಾರಿ ಸರ್ಕಾರ ಹೇಳಿದನ್ನು ಬರೆದು ಹೋಗುತ್ತಾರೆ. ಒಂದು ವಾರದಲ್ಲಿ ಪ್ರಕರಣದ ತನಿಖೆಯಾಗಬೇಕು. ಇದು ಮರ್ಡರ್. ಸರ್ಕಾರ ಮಾಡಿರುವ ಕೊಲೆ ಎಂದು ಅವರು ಆರೋಪ ಮಾಡಿದರು.

ಸದ್ಯ ಸ್ವಯಂಪ್ರೇರಿತವಾಗಿ ದೂರು ದಾಖಲಾಗಬೇಕು. ರಾಜ್ಯದಲ್ಲಿ ಅನೇಕ ಕಡೆ ಆಕ್ಸಿಜನ್ ಇಲ್ಲದೆ ಜನರು ಸಾಯುತ್ತಿದ್ದಾರೆ. ಬೆಂಗಳೂರಿನಲ್ಲೇ ಆಕ್ಸಿಜನ್ ಕೊರತೆ ಇದೆ ಎಂದು ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.

Next Story

RELATED STORIES