Top

ವನ್ಯಜೀವಿ ರಕ್ಷಣೆಗಾಗಿ ಬಿಆರ್​ಟಿಯಲ್ಲಿ ಮಾಧ್ಯಮ ಕಾರ್ಯಾಗಾರ

ವನ್ಯಜೀವಿಗಳು ಸಮಾಜ ಜನಸಾಮಾನ್ಯರ ಆಸ್ತಿ

ವನ್ಯಜೀವಿ ರಕ್ಷಣೆಗಾಗಿ ಬಿಆರ್​ಟಿಯಲ್ಲಿ ಮಾಧ್ಯಮ ಕಾರ್ಯಾಗಾರ
X

ಚಾಮರಾಜನಗರ: ಜಗತ್ತಿನ ಜೀವ ವೈವಿಧ್ಯದ ವಿಶಿಷ್ಟ ಪ್ರಾಕೃತಿಕ ತಾಣ ಬಿಳಿಗಿರಿ ರಂಗನಬೆಟ್ಟ. ಸಮುದ್ರ ಮಟ್ಟದಿಂದ 1,500 ಮೀ ಎತ್ತರದಲ್ಲಿರುವ ಅಪರೂಪದ ವನ್ಯಧಾಮವಾಗಿದ್ದು, ವಿವಿಧ ಬಗೆಯ ಅರಣ್ಯ ಲಕ್ಷಣ ಹೊಂದಿರೋದು ವಿಶೇಷವಾಗಿದೆ. ಇಲ್ಲಿನ ಕಾಡಿನ ಹಿತವಾದ ಹವಾಮಾನ, ದಟ್ಟವಾದ ಕಾಡು, ಸೋಲಿಗ ಬುಡಕಟ್ಟು ಸಮುದಾಯ, ಸೋಲಿಗರ ಆರಾಧ್ಯದೈವ ದೊಡ್ಡ ಸಂಪಿಗೆ ಇಲ್ಲಿನ ಪ್ರಮುಖ ಆಕರ್ಷಣೆ. ಇಷ್ಟೆಲ್ಲಾ ವೈವಿಧ್ಯತೆಯನ್ನು ಹೊಂದಿರುವ ಬಿಆರ್​ಟಿ ಟೈಗರ್ ರಿಸರ್ವ್ ಫಾರೆಸ್ಟ್ನಲ್ಲಿ ಪರಿಸರದ ಸಂರಕ್ಷಣೆ ವಿಚಾರವಾಗಿ ಮಾಧ್ಯಮ ಕಾರ್ಯಗಾರವೊಂದು ನಡೆಯಿತು.


ಕಾಡು ದೇಶದ ಸಂಪತ್ತು. ಕಾಡನ್ನಾ ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರದ್ದು, ಕಾಡು ವನ್ಯಜೀವಿಗಳನ್ನು ರಕ್ಷಣೆ ಮಾಡುವ ಹೊಣೆ ಅರಣ್ಯ ಇಲಾಖೆ ಹಾಗೂ ಸಿಬ್ಬಂದಿಗಳು ಅನ್ನೋ ಕಾಲಘಟ್ಟದಲ್ಲಿ ವನ್ಯ ಜೀವಿಗಳು ಸರ್ಕಾರದ ಆಸ್ತಿಯಲ್ಲಾ ನಮ್ಮೆಲ್ಲರ ಆಸ್ತಿ. ಅವು ಸಮಾಜ ಹಾಗೂ ಜನಸಾಮಾನ್ಯರ ಆಸ್ತಿ ಎಂದು ಪಿಸಿಎಫ್ ಅಜಯ್ ಮಿಶ್ರಾ ಹೇಳಿದರು.

ವನ್ಯ ಜೀವಿಗಳನ್ನ ಸಂರಕ್ಷಿಸುವ ಅಗತ್ಯ ಇರೋ ಹಿನ್ನಲೆ ಅರಣ್ಯ ಇಲಾಖೆಯಿಂದ ಕಾರ್ಯಗಾರ ಎರ್ಪಡಿಸಲಾಗಿತ್ತು.. ಚಾಮರಾಜನಗರದ ಕೆ.ಗುಡಿ ಬಿಆರ್​ಟಿ ಹಲಿ ಸಂರಕ್ಷಿತ ಪ್ರದೇಶದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಕಾಲ ನಡೆದ ಕಾರ್ಯಗಾರದಲ್ಲಿ ರಾಜ್ಯ ಮಟ್ಟದ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ಪಿಸಿಸಿಎಫ್ ಶಿವರಾಜ್ ಸಿಂಗ್ ಪಿಸಿಸಿಎಫ್ ಅಜಯ್ ಮಿಶ್ರಾ ಬಿಆರ್​ಟಿ ಡಿಸಿಎಫ್ ಸಂತೋಷ್ ಕುಮಾರ್, ಸಿಸಿಎಫ್ ಮನೋಜ್ ಕುಮಾರ್ ಭಾಗವಹಿಸಿದರು.


ಮಾಧ್ಯಮ ಕಾರ್ಯಗಾರದಲ್ಲಿ ಅರಣ್ಯ ಇಲಾಖೆ ಎದುರಿಸ್ತಿರೋ ಸಮಸ್ಯೆಗಳು, ಅರಣ್ಯ ಸಂರಕ್ಷಣೆಯಲ್ಲಿ ಮಾಧ್ಯಮದ ಮಾತ್ರ. ಮನುಷ್ಯ ಮತ್ತು ವನ್ಯ ಜೀವಿಗಳೊಂದಿಗಿನ ಸಂಘರ್ಷ. ಕಾಡಿನ ರಕ್ಷಣೆಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಶೇಷ ಸಂವಾದ ಎರ್ಪಡಿಸಲಾಗಿತ್ತು. ಖ್ಯಾತ ಅಂಕಣಕಾರ ನಾಗೇಶ್ ಹೆಗಡೆ. ಡಿಸಿಎಫ್ ಸಂಥೋಷ್ ಕುಮಾರ್ ಸೇರಿದಂತೆ ಹಲವರು ಇದ್ದು ಉಪನ್ಯಾಸ ನೀಡಿದರು.

ಇನ್ನೂ ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳಿಗೆ ಬಿಆರ್​ಟಿ ಟೈಗರ್ ರಿಸರ್ವ್ ಫಾರೆಸ್ಟ್​ನಲ್ಲಿರೋ ಸೋಲಿಗ ಸಮುದಾಯ ಕನ್ನೇರಿ ಕಾಲೋನಿಗೂ ಕೂಡ ಭೇಟಗೆ ಅವಕಾಶ ನಿಡಲಾಗಿತ್ತು. ಸೋಲಿಗ ಬುಡಕಟ್ಟು ಸಮುದಾಯದ ಜೊತೆ ಸಂವಾದ ಕೂಡ ಏರ್ಪಡಿಲಸಾಗಿದ್ದು ಸೋಲಿಗ ಸಮದಾಯದ ಅಭಿವೃದ್ದಿಗಾಗಿ ಇಲಾಖೆ ಕೈಗೊಂಡ ಕ್ರಮಗಳನ್ನು ತೋರಿಸಲಾಯ್ತು.


ಪ್ರತಿವರ್ಷದಂತೆ ಈ ವರ್ಷವೂ ಕಾರ್ಯಗಾರ ಏರ್ಪಡಿಲಾಗಿದ್ದು 100ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದರು. ಅರಣ್ಯ ಇಲಾಖೆ ಮತ್ತು ಮಾಧ್ಯಮದಿಂದ ವನ್ಯಜೀವಿ ಸಂರಕ್ಷಣೆ ಸಾಧ್ಯ ಎನ್ನುವ ಹಿನ್ನೆಲೆ ಈ ಕಾರ್ಯಗಾರ ನಡೆಸಲಾಗಿದ್ದು ಮಹತ್ವದ ವಿಚಾರಗಳು ಚರ್ಚೆಯಾದವು.

Next Story

RELATED STORIES