Top

ಮಾನ-ಮರ್ಯಾದೆ ಇದ್ರೆ ಅಧಿಕಾರದಲ್ಲಿ ಮುಂದುವರೆಯಬಾರದು - ಸಿದ್ದರಾಮಯ್ಯ ವಾಗ್ದಾಳಿ

ಜವಾಬ್ದಾರಿಯುತ ಆರೋಗ್ಯ ಮಂತ್ರಿ ಸತ್ಯ ಹೇಳಬೇಕಿತ್ತು. ಸತ್ಯ ಮುಚ್ಚಿಟ್ಟು ಕೇವಲ ಮೂರು ಮಂದಿ ಸಾವು ಎಂದಿದ್ದಾರೆ. ಬೇಜಬ್ದಾರಿ ಹೇಳಿಕೆಗಳು ಖಂಡನೀಯ

ಮಾನ-ಮರ್ಯಾದೆ ಇದ್ರೆ ಅಧಿಕಾರದಲ್ಲಿ ಮುಂದುವರೆಯಬಾರದು - ಸಿದ್ದರಾಮಯ್ಯ ವಾಗ್ದಾಳಿ
X

ಚಾಮರಾಜನಗರ: ಆಮ್ಲಜನಕದ ಕೊರತೆಯಿಂದಲೇ 24 ಜನ ಸತ್ತಿದ್ದಾರೆ. ಸಚಿವ ಡಾ.ಕೆ ಸುಧಾಕರ್ ಮೂರು ಮಂದಿ ಮಾತ್ರ ಮೃತ ಎಂಬ ಹೇಳಿಕೆ ಶುದ್ಧ ಸುಳ್ಳು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಕಾಂಗ್ರೆಸ್​​ ನಾಯಕರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಮಾಹಿತಿ ಕಲೆಹಾಕಿದರು ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರತಿನಿತ್ಯ 350 ಸಿಲಿಂಡರ್​ಗಳು ಚಾಮರಾಜನಗರ ಆಸ್ಪತ್ರೆಗೆ ಬೇಕು. ಆದರೆ, ಭಾನುವಾರ ಕೇವಲ 126 ಮಾತ್ರ ಸರಬರಾಜಾಗಿವೆ. ವೈದ್ಯರ ಪ್ರಕಾರ 24 ಮಂದಿ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಕೊರತೆಯಿಂದಲೇ ಸಾವು ಎಂದು ವೈದ್ಯರು ನನ್ನ ಮುಂದೆ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಇನ್ನು 224 ಸಿಲಿಂಡರ್​ಗಳ ಕೊರತೆ ಇತ್ತು. ಆಕ್ಸಿಜನ್ ಸರಬರಾಜಾಗದೆ ಸಾವನ್ನಪ್ಪಿದ್ದಾರೆ. ಜವಾಬ್ದಾರಿಯುತ ಆರೋಗ್ಯ ಮಂತ್ರಿ ಸತ್ಯ ಹೇಳಬೇಕಿತ್ತು. ಸತ್ಯ ಮುಚ್ಚಿಟ್ಟು ಕೇವಲ ಮೂರು ಮಂದಿ ಸಾವು ಎಂದಿದ್ದಾರೆ. ಬೇಜಬ್ದಾರಿ ಹೇಳಿಕೆಗಳು ಖಂಡನೀಯ ಎಂದು ಸುಧಾಕರ್ ಹೇಳಿಕೆಗೆ ಟೀಕಿಸಿದ್ದಾರೆ.

ಇನ್ನು ಆಕ್ಸಿಜನ್ ಪೂರೈಕೆ ಸರ್ಕಾರದ ಕರ್ತವ್ಯ. ಜಿಲ್ಲಾಡಳಿತ ಪೂರ್ವ ಸಿದ್ದತೆ ಮಾಡಿಕೊಳ್ಳುವಲ್ಲಿ ಎಡವಿದೆ. ರಾತ್ರಿ ಹತ್ತು ಘಂಟೆವರೆಗೂ ಆಕ್ಸಿಜನ್ ಸಮಸ್ಯೆ ತಿಳಿದುಕೊಂಡಿಲ್ಲ. ರಾಜ್ಯ ಸರ್ಕಾರ ದುರಂತದ ಹೊಣೆ ಹೊರಬೇಕು. ಮೈಸೂರು ಡಿಸಿ ಹೇಳಿಕೆ ಸತ್ಯಕ್ಕೆ ದೂರ ಎಂದು ಚಾಮರಾಜನಗರ ಡಿಸಿ ಹೇಳ್ತಾರೆ. ರೋಹಿಣಿ ಸಿಂಧೂರಿ ಒಂದು ರೀತಿ, ಚಾಮರಾಜನಗರ ಡಿಸಿ ಡಾ.ಎಂ.ಆರ್​ ರವಿ ಇನ್ನೊಂದು ರೀತಿ ಹೇಳ್ತಾರೆ. ನಾನು ಈಗಾಗಲೇ ಹೇಳಿರುವಂತೆ ನ್ಯಾಯಾಂಗ ತನಿಖೆಯಾಗಬೇಕು. ಸತ್ಯ ಹೊರ ಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸರ್ಕಾರ ಕೂಡಲೇ ಅಗತ್ಯ ಆಕ್ಸಿಜನ್ ಪೂರೈಕೆ ಮಾಡಬೇಕು. ಸಿಎಂ, ಆರೋಗ್ಯ ಸಚಿವ, ಜಿಲ್ಲಾ ಮಂತ್ರಿ ಘಟನೆಯ ಹೊಣೆ ಹೊರಬೇಕು. ಮಾನ-ಮರ್ಯಾದೆ ಇದ್ರೆ ಅಧಿಕಾರದಲ್ಲಿ ಮುಂದುವರೆಯಬಾರದು. ಮೈಸೂರು ಡಿಸಿ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸದ್ಯ ಜಿಲ್ಲಾ ಮಂತ್ರಿ ಸುರೇಶ್ ಕುಮಾರ್ ಎರಡನೇ ಅಲೆ ಬಂದ ಮೇಲೆ ಒಂದೇ ಒಂದು ಮೀಟಿಂಗ್ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಕೊಡೋದು ಬೆಂಗಳೂರಲ್ಲಿ ಕುಳಿತು ಮಜಾ ಮಾಡೋಕಾ(?) ಮೃತರಲ್ಲಿ ತುಂಬಾ ಜನ ಬಡವರು, ಸರ್ಕಾರ ಪರಿಹಾರ ಘೋಷಿಸಬೇಕು. 14 ಮಂದಿ ಯುವಕರೇ ಸಾವನ್ನಪ್ಪಿದ್ದಾರೆ. ಮೃತ ಪ್ರತಿ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

Next Story

RELATED STORIES