Top

'ಯುವರತ್ನ ಚಿತ್ರದ ಕುರಿತು ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ'

ಯುವರತ್ನ ಚಿತ್ರದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಅವರು ಸೋಮವಾರ ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದಾರೆ.

ಯುವರತ್ನ ಚಿತ್ರದ ಕುರಿತು ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ
X

ಬಳ್ಳಾರಿ: ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ತುಂಬಾ ಅಭಿಮಾನ ತೋರುತ್ತಿದ್ದಾರೆ. ಚಿತ್ರದ ಕುರಿತು ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದು ನಟ ಪುನಿತ್​ ರಾಜ್​ಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.


ಯುವರತ್ನ ಚಿತ್ರದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಅವರು ಸೋಮವಾರ ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದಾರೆ. ಪುನಿತ್​ ರಾಜ್​ಕುಮಾರ್ ಸ್ವಾಗತಿಸಲು ದುರ್ಗಮ್ಮ ದೇವಿ ದೇವಾಲಯ ಮುಂಭಾಗ ಸಾಕಷ್ಟು ಅಭಿಮಾನಿಗಳು ಸೇರಿದ್ದರು.

ಈ ವೇಳೆ ಮಾತನಾಡಿದ ಅವರು, ಚಿತ್ರದಲ್ಲಿ ಏನೆಲ್ಲ ಸಂದೇಶ ಇದೆ ಅನ್ನೋದು ಚಿತ್ರ ನೋಡಿ. ಅಭಿಮಾನಿಗಳ ಈ ಅಭಿಮಾನಕ್ಕೆ ನಾನು ಎಂದಿಗೂ ಚಿರಋಣಿ ಎಂದು ನಟ ಪುನಿತ್​ ರಾಜ್​ಕುಮಾರ್ ಅವರು ಮಾತನಾಡಿದ್ದಾರೆ.

Next Story

RELATED STORIES