Top

ಪೆಟ್ರೋಲ್​ ದರದಲ್ಲಿ ರಾಜ್ಯದಲ್ಲಿಯೇ ನೂರರ ಗಡಿ ದಾಟಿದ ಮೊದಲ ಜಿಲ್ಲೆ ಇದು

ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100.90 ಪೈಸೆಗೆ ಏರಿಕೆ ಕಂಡರೆ, ವಿಜಯನಗರ ಜಿಲ್ಲೆಯಲ್ಲಿ ₹100.45ಕ್ಕೆ ಹೆಚ್ಚಾಗಿದೆ.

ಪೆಟ್ರೋಲ್​ ದರದಲ್ಲಿ ರಾಜ್ಯದಲ್ಲಿಯೇ ನೂರರ ಗಡಿ ದಾಟಿದ ಮೊದಲ ಜಿಲ್ಲೆ ಇದು
X

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಶತಕದ ಗಡಿ ದಾಟಿದರೆ, ಇನ್ನೂ ವಿಜಯನಗರ ಜಿಲ್ಲೆಯಲ್ಲಿ ನೂರರ ಗಡಿ ದಾಟಿ ಬಂದಿದೆ. ಅಂದಹಾಗೆ, ರಾಜ್ಯದಲ್ಲಿಯೇ ನೂರರ ಗಡಿ ದಾಟಿದ ಮೊದಲ ಜಿಲ್ಲೆ ಬಳ್ಳಾರಿಯಾಗಿದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100.90 ಪೈಸೆಗೆ ಏರಿಕೆ ಕಂಡರೆ, ವಿಜಯನಗರ ಜಿಲ್ಲೆಯಲ್ಲಿ ₹100.45ಕ್ಕೆ ಹೆಚ್ಚಾಗಿದೆ.

ಗಣಿ ಜಿಲ್ಲೆಗಳಾದ ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಹೋದ ವಾರ ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ಪ್ರತಿ ಲೀಟರ್ ಗೆ ₹ 98.33 ಇತ್ತು. ಸತತ ನಾಲ್ಕು ವಾರಗಳಿಂದ ಏರಿಕೆಯ ಹಾದಿಯಲ್ಲಿದ್ದ ತೈಲ ದರ ಈ ವಾರ ನೂರರ ಗಡಿ ದಾಟಿ ಹೊಸ ದಾಖಲೆ ಬರೆದಿದೆ. ಪ್ರತಿ ಲೀಟರ್ ಡೀಸೆಲ್ ದರ ₹ 96.30 ಇದೆ. ಪೆಟ್ರೋಲ್ ದರ ಮೂರಂಕಿ ದಾಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.ಕೋವಿಡ್ ಲಾಕ್ಡೌನ್ನಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಕಳೆದುಕೊಂಡು, ವ್ಯಾಪಾರ ವಹಿವಾಟು ಮಾಡದೆ ಮನೆಯಲ್ಲಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸತತವಾಗಿ ತೈಲ ದರ ಹೆಚ್ಚಿಸುತ್ತಿರುವುದು ಮದ್ಯಮ ವರ್ಗದ ಜನತೆಗೆ ತೀವ್ರವಾದ ಸಂಕಷ್ಟ ತಂದಿದೆ.

ಇನ್ನೂ ತೈಲ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಪೆಟ್ರೋಲ್ ಬಂಕ್ ಮಾಲೀಕರೂ ಕೂಡ ಹೆಚ್ಚಿನ ಬಂಡವಾಳ ಹಾಕಬೇಕಾಗುತ್ತದೆ. ಬೆಲೆ ಹೆಚ್ಚಳದಿಂದ ಪರೋಕ್ಷ, ಅಪರೋಕ್ಷವಾಗಿ ಎಲ್ಲ ವಲಯದವರಿಗೂ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಸರ್ಕಾರ ಕೂಡಲೇ ತೆರಿಗೆ ಕಡಿತ ಮಾಡಿ, ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು' ಎಂದು ಜಿಲ್ಲಾ ಪೆಟ್ರೋಲ್ ಪಂಪ ಸಂಘದ ಚಂದ್ರಶೇಖರ ಅವರು ಹೇಳಿದರು.

ಒಟ್ಟಾರೆಯಾಗಿ ದೇಶದಲ್ಲಿ ತೈಲ ದರ ಏರಿಕೆಯಿಂದ ಹಣ್ಣು, ತರಕಾರಿ, ದಿನಸಿ ಸೇರಿದಂತೆ ಇತರೆ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಇದು ನೇರವಾಗಿ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ.ಹೀಗಾಗಿ ಶೀಘ್ರವಾಗಿ ಇದನ್ನು ಜಿಎಸ್​ಟಿ ವ್ಯಾಪ್ತಿಯಲ್ಲಿ ಸೇರಿಸಿದ್ರೇ ದೇಶದ ಜನತೆಗೆ ಅನುಕೂಲ ಆಗಲಿದೆ ಅನ್ನೋದು ಜನತೆಯ ಆಶಯ ವಾಗಿದೆ.

Next Story

RELATED STORIES