Top

ಬಳ್ಳಾರಿಯ ಬಿಸಿಲಿಗೆ ಕೊರೊನಾ ಇರಲ್ಲ ಸತ್ತು ಹೋಗುತ್ತೆ - ಆನಂದ್ ಸಿಂಗ್

ಖಾಸಗಿ ವೈದ್ಯರನ್ನು ಸಭೆ ಕರೆದು ವ್ಯಾಕ್ಸಿನೇಷನ್ ನೀಡಿ ಹಾಕಿಸಲು ಡಿಸಿಗೆ ಸೂಚಿಸಲಾಗಿದೆ.

ಬಳ್ಳಾರಿಯ ಬಿಸಿಲಿಗೆ ಕೊರೊನಾ ಇರಲ್ಲ ಸತ್ತು ಹೋಗುತ್ತೆ - ಆನಂದ್ ಸಿಂಗ್
X

ಬಳ್ಳಾರಿ: ಕೊರೊನಾ ಎಡರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 299 ಪ್ರಕರಣಗಳಲ್ಲಿ, ಬಳ್ಳಾರಿ, ಹೊಸಪೇಟೆ, ಸಂಡೂರಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳ ಇರೋ ಕಡೆಗಳಲ್ಲಿ ಇರುವಂತೆ ಅಧಿಕಾರಿಗಳಿಗೆ ಸೂಚನೆ ಎಂದಿದ್ದಾರೆ.

ಇನ್ನು ಹಳೆ ಡೆಂಟಲ್ ಕಾಲೇಜ್, ಟ್ರಾಮಾ ಕೇರ್, ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಕೊವೀಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಂದಾಲ್ ಕಂಪನಿಯಲ್ಲಿ ಹೆಚ್ಚಿನ ಟೆಸ್ಟಿಂಗ್ ಮಾಡಲು ಸೂಚನೆ ನೀಡಲಾಗಿದ್ದು, ಕೊರೊನಾ ಚುಚ್ಚುಮದ್ದು ಸ್ವಲ್ಪ ಕಡಿಮೆ ಇತ್ತು. ಜನತೆ ವ್ಯಾಕ್ಸಿನೇಷನ್ ಹೆಚ್ಚು ಹಾಕಿಸಿ ಕೊಳ್ಳುತ್ತಿದ್ದಾರೆ. ವ್ಯಾಕ್ಸಿನೇಷನ್ ಮತ್ತೆ ಬಂದಿದೆ. ಜನತೆ ಮುಂದೆ ಬಂದು ಹಾಕಿಸಿಕೊಳ್ಳಿ ಎಂದು ಆನಂದ್ ಸಿಂಗ್ ಅವರು ಮನವಿ ಮಾಡಿದ್ದಾರೆ.

ಇನ್ನು 20 ರಿಂದ 40 ವರ್ಷದ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬರ್ತಿದೆ. ಖಾಸಗಿ ವೈದ್ಯರನ್ನು ಸಭೆ ಕರೆದು ವ್ಯಾಕ್ಸಿನೇಷನ್ ನೀಡಿ ಹಾಕಿಸಲು ಡಿಸಿಗೆ ಸೂಚಿಸಲಾಗಿದೆ. ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುತ್ತೀದೆ. ಜನರು ಕೂಡಾ ತಮ್ಮ ಜವಾಬ್ದಾರಿ ಮೆರೆಯಬೇಕು. ಇಡೀ ದೇಶದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮತದಾರರಿಗೆ ಜಾಗೃತಿ. ಬಳ್ಳಾರಿಯ ಬಿಸಿಲಿಗೆ ಕೊರೊನಾ ಇರಲ್ಲ, ಸತ್ತು ಹೋಗುತ್ತೆ ಎಂದು ಸಚಿವ ಆನಂದ್ ಸಿಂಗ್ ಅವರು ತಿಳಿಸಿದ್ದಾರೆ.

Next Story

RELATED STORIES