Top

ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ನೀತಿ ಮೇಲೆ ರಾಜಕಾರಣ

ಲಖನ ಜಾರಕಿಹೊಳಿಗೆ ಒಳ್ಳೆಯದಾಗಲಿ, ಅವರಿಗೆ ಯಶಸ್ಸಾಗಲಿ

ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ನೀತಿ ಮೇಲೆ ರಾಜಕಾರಣ
X

ಬೆಳಗಾವಿ: ನಾನು ಲೋಕಸಭೆ ಚುನಾವಣೆ ಪ್ರಚಾರದ ಪ್ರಗತಿ ಮಾಹಿತಿ ಪಡೆಯುವೆ. ಈಗಾಗಲೇ ರೈತ ಮುಖಂಡ ಬಾಬಾಗೌಡ ಪಾಟೀಲ, ಕಮ್ಯೂನಿಸ್ಟ್ ಮುಖಂಡರು ಎಲ್ಲ ಭೇಟಿ ಮಾಡಿರುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಸಿರು ಟಾವಲ್​ ಹಾಕೊಂಡವರು, ಹಸಿರು ಟಾವಲೆ ಹಾಕಿಕೊಳ್ಳದ ಶೇ.70ರಷ್ಟು ರೈತರು ಇದ್ದಾರೆ. ಈ ಮೂರು ಉಪ ಚುನಾವಣೆಯಲ್ಲಿ ರೈತರು ಇದ್ದಾರೆ. ರೈತರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಈ ಸ್ವಾಭಿಮಾನ ಉಳಿಸಿಕೊಳ್ಳಲು ಕಾಂಗ್ರೆಸ್​ಗೆ ಮತ ನೀಡುವಂತೆ ಮನವಿ ಮಾಡುತ್ತೇವೆ ಎಂದರು.

ಇನ್ನು ಬಿಜೆಪಿಯವರು ಲಿಂಗಾಯತರು ಮಾಡಲಿ, ಮಠವಾದರೂ ಮಾಡಲಿ. ನಮಗೆ ಲಿಂಗಾಯತರು, ಮರಾಠಾಗರು ನಮ್ಮ ಅಣ್ಣತಮ್ಮಂದಿರು, ಬೇರೆ ಜನಾಂಗದವರು ನಮ್ಮ ಅಣ್ಣತಮ್ಮಂದಿರು. ಅವರು ಬೇರೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ನೀತಿ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ನುಡಿದರು.

ಲಖನ್ ಜಾರಕಿಹೊಳಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂಬ ಹೇಳಿಕೆಗೆ ಬಗ್ಗೆ ಮಾತನಾಡಿದ ಅವರು, ಲಖನ ಜಾರಕಿಹೊಳಿಗೆ ಒಳ್ಳೆಯದಾಗಲಿ, ಅವರಿಗೆ ಯಶಸ್ಸಾಗಲಿ ಎಂದರು.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಲಿದೆ. ಸರ್ಕಾರ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಅವರ ನೋವವನ್ನ ಸರ್ಕಾರ ಕೇಳಬೇಕು. ಅವರ ಮುಷ್ಕರ ಮೊಟಕು ಮಾಡಬಾರದು. ಸರ್ಕಾರ ಅವರ ಮೇಲೆ ನಡೆಸುತ್ತಿರುವ ಧೋರಣೆ ಸರಿಯಿಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.

Next Story

RELATED STORIES