Top

ಸತೀಶ್ ಜಾರಕಿಹೊಳಿ ಎರಡರಿಂದ ಮೂರು ಲಕ್ಷ ಅಂತರದಿಂದ ಗೆಲ್ತಾರೆ

ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು. ಈಗ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ

ಸತೀಶ್ ಜಾರಕಿಹೊಳಿ ಎರಡರಿಂದ ಮೂರು ಲಕ್ಷ ಅಂತರದಿಂದ ಗೆಲ್ತಾರೆ
X

ಬೆಳಗಾವಿ: ವ್ಯಾಪಾಕವಾದ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿದೆ. ಸತೀಶ್ ಜಾರಕಿಹೊಳಿ ಎರಡರಿಂದ ಮೂರು ಲಕ್ಷ ಅಂತರದಿಂದ ಗೆಲವು ಸಾಧಿಸುತ್ತೇವೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಗುರುವಾರ ಹೇಳಿದರು.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ನ ಲಿಂಗಾಯತ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಬಗ್ಗೆ ಇದೇ. ಬಿಜೆಪಿ ಪಕ್ಷದ ಬಗ್ಗೆ ಜನರಲ್ಲಿ ಬೇಸರವಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಾಳೆ, ನಾಡಿದ್ದು ಚುನಾವಣಾ ಪ್ರಚಾರಕ್ಕೆ ಬರ್ತಾರೆ. ರಾಮದುರ್ಗ, ಸವದತ್ತಿ, ಬೆಳಗಾವಿ ಯಲ್ಲಿ ಪ್ರಚಾರ ಮಾಡ್ತಾರೆ. ಸಿದ್ದರಾಮಯ್ಯ ಮಾಸ್ ಲೀಡರ್ ನಮಗೆ ಅನುಕೂಲ ಆಗುತ್ತದೆ ಎಂದರು.

ಇನ್ನು ಜನರಿಗೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಚ್ಛೆ ದಿನ ಇಲ್ಲ ಎನ್ನವುದು ಜನರಿಗೆ ಗೊತ್ತಾಗಿದೆ. ಇಲ್ಲಿಂದ ಸಿಗ್ನಲ್ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಸಾರಿಗೆ ನೌಕರರ ಮುಷ್ಕರ ಸರ್ಕಾರದ ವೈಫಲ್ಯವಾಗಿದೆ. ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು. ಈಗ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸದ್ಯ ಉಪಚುನಾವಣೆಯಲ್ಲಿ ನಾವು ಶಕ್ತಿ ತೋರಸ್ತಿವಿ. ಯಾಕೇ ಜಗದೀಶ್ ಶೆಟ್ಟರ್​ಗೆ ಹೆದರಿಕೆ ಇದೆ. ಇವರು ಮುಖ್ಯಮಂತ್ರಿ ಆದಂತವರು, ಮತ್ತೆ ಮಂತ್ರಿ ಆಗಿದ್ದಾರೆ. ಜಗದೀಶ್ ಶೆಟ್ಟರ್ ಬೇರೆ ಯಾರಿಗಾದ್ರು ಮಂತ್ರಿ ಮಾಡಿದ್ರೆ ದೊಡ್ಡವರಾಗುತ್ತಿದ್ದರು. ಮುಖ್ಯಮಂತ್ರಿ ಆಗಿ ನಾನೇ ಮಂತ್ರಿ ಆಗ್ತಿನಿ ಅಂದ್ರೆ ಹೆಂಗ್ ಎಂದು ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ಕಿಡಿಕಾರಿದರು.

Next Story

RELATED STORIES