Top

ಏನ್​ ಮಾಡುತ್ತಿದೆ ಚುನಾವಣೆ ಆಯೋಗ - ರಾಮಲಿಂಗಾರೆಡ್ಡಿ ಪ್ರಶ್ನೆ

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಬರೀ ಭರವಸೆ ಕೊಡ್ತಾರೆ

ಏನ್​ ಮಾಡುತ್ತಿದೆ ಚುನಾವಣೆ ಆಯೋಗ - ರಾಮಲಿಂಗಾರೆಡ್ಡಿ ಪ್ರಶ್ನೆ
X

ಬೆಳಗಾವಿ: ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ಗೆ ಉತ್ತಮ ವಾತಾವರಣವಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಹೇಳಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಲಖನ ಜಾರಕಿಹೊಳಿ ಡಿಕೆಶಿ ರಾಜೀನಾಮೆ ವಿಚಾರಕ್ಕೆ ಡಿಕೆಶಿ ಉತ್ತರ ಕೊಡ್ತಾರೆ. ಕಾಂಗ್ರೆಸ್ ಪಕ್ಷ ಜಾತಿ ಆಧಾರದ ಮೇಲೆ ಮತ ಕೇಳುವುದಿಲ್ಲ ಎಂದರು.

ಇನ್ನು ಬಿಜೆಪಿಯವರಿಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇಲ್ಲ, ಬಿಜೆಪಿಯವರು ನಾವು ಕಟ್ಟಿದ ಮನೆಯಲ್ಲಿ ಆಳ್ವಿಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವ ರೀತಿ ಆಳ್ವಿಕೆ ಯಾವ ರೀತಿ ಮಾಡುತ್ತಿದ್ದಾರೆ ಎಲ್ಲರಿಗೂ ಗೊತ್ತಿದೆ. ದೇಶದಲ್ಲಿ ಯಾರಿಗೂ ರಕ್ಷಣೆ ಇಲ್ಲ, ಮೋದಿಯವರ ಏಳು ವರ್ಷದ ಏನು ಮಾಡಿದ್ದಾರೆ ಎನ್ನುವುದನ್ನ ಜನರಿಗೆ ಹೇಳಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಮರಾಠಾ ಅಭಿವೃದ್ಧಿ ನಿಗಮ, ಲಿಂಗಾಯತ ಅಭಿವೃದ್ಧಿ ಮಾಡಿದಿನಿ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚುನಾವಣಾ ಆಯೋಗ ಏನಾದರೂ ಕೆಲಸ ಮಾಡುತ್ತಿದಿಯಾ(?) ಚುನಾವಣೆ ಸಂದರ್ಭದಲ್ಲಿ ಏನು ಘೋಷಣೆ ಮಾಡಬಾರದು ಸರ್ಕಾರ. ಏನ್​ ಮಾಡ್ತಿದೇ ಚುನಾವಣಾ ಆಯೋಗ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಬರೀ ಭರವಸೆ ಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ನಾಲ್ಕು ವರ್ಷ ಸಾರಿಗೆ ಸಚಿವ ಆಗಿದ್ದೇ. ಆಗ ಒಂದೇ ಒಂದು ದಿನ ಪ್ರತಿಭಟನೆ ನಡೆಯಿತು. ನಾವು ಕಾಲ ಕಾಲಕ್ಕೆ ಕಾರ್ಮಿಕ ಮುಖಂಡರನ್ನ ಕರೆದು ಸಭೆ ಮಾಡುತ್ತಿದ್ದೇ. ಅವರು ಬೇಡಿಕೆ ಸಾಕಲ್ಲವೇ. ಅದರೆ, ಯಾವುದು ಮಾಡಕ್ಕ ಆಗುತ್ತೇ ಯಾವುದು ಮಾಡಕ್ಕ ಆಗಲ್ಲ ಅಂತಾ ಸ್ಪಷ್ಟವಾಗಿ ಹೇಳಬೇಕು. ನಾನು ಹಿಂದೆ ಮಾಡಲು ಸಾಧ್ಯವುರುವ ಬೇಡಿಕೆ ಮಾಡಿದೀನಿ. ಸಾಧ್ಯವಿಲ್ಲದನ್ನ ಮಾಡಲು ಆಗಲ್ಲ ಅಂತ ಮನವರಿಕೆ ಮಾಡಿದ್ದೇನೆ. ಅವರು ಕೇಳಿದ ಎಲ್ಲಾ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಆದರೂ ಸಾರಿಗೆ ಸಚಿವರು, ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ಮಾಡಿಲ್ಲ, ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತೇವೆ. ಇವರು ಏನು ಪ್ರಾಮಿಸ್ ಮಾಡಿದ್ದಾರೆ ಗೊತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಅವರು ಮಾತನಾಡಿದ್ದಾರೆ.

Next Story

RELATED STORIES