Top

ಹೊರಗಡೆಯವರು ಬಂದು ರಾಜಕೀಯ ಮಾಡುತ್ತಿರುವುದು ಜನರಿಗೆ ಇಷ್ಟ ಆಗುತ್ತಿಲ್ಲ

ಮೊದಲು ಅವರು 17 ಸಾವಿರ ಕೋಟಿ ಕೊಟ್ಡಿರುವ ಪಟ್ಟಿ ಬಿಡುಗಡೆ ಮಾಡಲಿ. 20 ಲಕ್ಷ ಕೋಟಿ ಯಾರಿಗೆ ಕೊಟ್ಟಿರುವ ಬಗ್ಗೆ ಪಟ್ಟಿ ನೀಡಲಿ

ಹೊರಗಡೆಯವರು ಬಂದು ರಾಜಕೀಯ ಮಾಡುತ್ತಿರುವುದು ಜನರಿಗೆ ಇಷ್ಟ ಆಗುತ್ತಿಲ್ಲ
X

ಬೆಳಗಾವಿ: ಸರ್ಕಾರ ನಡೆಸುವುದಕ್ಕೆ ಇವರಿಗೆ ಅನುಭವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾರಿಗೆ ನೌಕರರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಈ ರೀತಿ ಆದರೆ ಬೇರೆ ಜಿಲ್ಲೆಯಲ್ಲಿ ಪರಿಸ್ಥಿತಿ ಏನು(?) ನಾನು ಅದಕ್ಕೆ ಮೊದಲ ದಿನದಿಂದ ಹೇಳುತ್ತಿದ್ದೇನೆ. ಸಾರಿಗೆ ನೌಕರರ ಜೊತೆಗೆ ಮಾತನಾಡಿ ಅಂತಾ. ಸಾರಿಗೆ ನೌಕರರನ್ನ ಕುಟುಂಬ ಸದಸ್ಯರಂತೆ ನಡೆಸಿಕೊಳ್ಳಿ. ಎಲ್ಲಾ ನೌಕರರ ಮೇಲೂ ಸಂಶಯ ಪಡ್ತಾರೆ ಎಂದರು.

ಇನ್ನು ಕಾನೂನು ಉಪಯೋಗಿಸಿಕೊಳ್ಳು ಬಗ್ಗೆ ಯಾಕ್ ಮಾತನಾಡಬೇಕು. ರೈತರ ಹತ್ತರ, ಕಾರ್ಮಿಕರ ಹತ್ತಿರ ಯಾಕ ಮಾತಾಡಬೇಕು ಅಂತಾ ಪದ್ಧತಿ ಬಿಡಬೇಕು. ಎಲ್ಲಿಂದನೋ ಬಂದು ಎಲ್ಲೋ ದರ್ಬಾರ ಮಾಡುವುದು ನಡಿತಿದೆ ಎಂದು ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ನೈಟ್​ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೈಟ್ ಕರ್ಫ್ಯೂದಿಂದ ಪ್ರಯೋಜನೆ ಆಗುತ್ತೆ ಅಂತಾ ಅನಸುತ್ತಿಲ್ಲ,ಇಷ್ಟ ಬಂದ ರೀತಿಯಲ್ಲಿ ಸರ್ಕಾರ ನಿರ್ಧಾರ ಮಾಡುತ್ತಿದೆ ಎಂದಿದ್ದಾರೆ.

ಸದ್ಯ ಈಗ ಆಲ್ ಪಾರ್ಟಿಯವರನ್ನ ಕರೆದು ಮೀಟಿಂಗ್ ಮಾಡುತ್ತೇನೆ ಅಂತಿದ್ದಾರೆ. ಈಗ ಯಾಕೇ ಮಾಡ್ತಾರೆ ಅಂತಾ. ಎಲ್ಲಾ ಮಾಡಬಾರದ್ದು ಮಾಡಿದ್ದಾರೆ. ದೇಶ ಮತ್ತು ರಾಜ್ಯದಲ್ಲಿ ಅನ್ಯಾಯ ಮಾಡಿದ್ದಾರೆ. ದೀಪ ಹಚ್ಚಿದ್ವಿ, ಜಾಗಟೆ ಹೊಡದ್ವಿ. ಮೊದಲು ಅವರು 17 ಸಾವಿರ ಕೋಟಿ ಕೊಟ್ಡಿರುವ ಪಟ್ಟಿ ಬಿಡುಗಡೆ ಮಾಡಲಿ. 20 ಲಕ್ಷ ಕೋಟಿ ಯಾರಿಗೆ ಕೊಟ್ಟಿರುವ ಬಗ್ಗೆ ಪಟ್ಟಿ ನೀಡಲಿ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚಿನ ಭ್ರಷ್ಟಾಚಾರ ಮಾಡಿದ್ದಾರೆ. ಚಾಲಕರು, ನೇಕಾರರಿಗೆ ಏನು ಹಣ ಬಂದಿಲ್ಲ, ಫಿಲ್ಮನವರು ಏನ್ ಮಾಡಬೇಕು. ಇವರಿಗೆ ಸರ್ಕಾರ ನಡೆಸುವುದಕ್ಕೆ ಅನುಭವವಿಲ್ಲ, ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣವಿದೆ. ಜನಕ್ಕೆ ನಮ್ಮ ಕಾಂಗ್ರೆಸ್​ಗೆ ವೋಟ್ ಹಾಕುವ ಮೂಲಕ ಕೇಂದ್ರ, ರಾಜ್ಯ ಸರ್ಕಾರ ಕ್ಕೆ ಸಂದೇಶ ರವಾನಿಸುತ್ತಾರೆ. ಹೊರಗಡೆಯವರು ಬಂದು ರಾಜಕೀಯ ಮಾಡುತ್ತಿರುವುದು ಜನರಿಗೆ ಇಷ್ಟ ಆಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES