Top

ಮೋಸ್ಟ್​ ವಾಂಟೆಡ್​ ಸೈಬರ್​ ವಂಚರ ಬಂಧನ

ಸೈಬರ್​ ವಂಚನೆಗಾಗಿ 50 ಮೊಬೈಲ್, 304 ಸಿಮ್ ಕಾರ್ಡ್ ಮತ್ತು 50 ಬೇರೆ ಬೇರೆ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದ ಆರೋಪಿಗಳು

ಮೋಸ್ಟ್​ ವಾಂಟೆಡ್​ ಸೈಬರ್​ ವಂಚರ ಬಂಧನ
X

ಬೆಳಗಾವಿ:ಕರ್ನಾಟಕ ಹಾಗೂ ಹೈದರಾಬಾದ್ ಸೇರಿ ದೇಶದ ನಾನಾ ರಾಜ್ಯದ ಪೊಲೀಸರಿಗೆ ಬೇಕಿದ್ದ ಮೋಸ್ಟ್ ವಾಂಟೆಡ್‌ ಸೈಬರ್​ ವಂಚಕರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್​ ಮೂಲದ ಚಂದ್ರಪ್ರಕಾಶ ದಾಸ್ , ಆಶಾ ಚಂದ್ರಪ್ರಕಾಶ ದಾಸ್ ಹಾಗೂ ಮಹಾರಾಷ್ಟ್ರದ ಮೂಲದ ಅನ್ವರ್ ಶೇಕ್ ಬಂಧಿತ ಆರೋಪಿಗಳು.

ಆರೋಪಿಗಳು ಬೆಳಗಾವಿ ತಾಲೂಕಿನ ಕಂಗ್ರಾಳಿಯ ಬಿಎಸ್ಎನ್​ಎಲ್​ ನಿವೃತ್ತ ನೌಕರ ಯಲ್ಲಪ್ಪ ಜಾಧವ ಅವರಿಗೆ ₹10 ಲಕ್ಷ ವಂಚಿಸಿದ್ದರು. ಪ್ರಕರಣ ಸಂಬಂಧ ಬೆಳಗಾವಿತ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಪಿಐ ಬಿ.ಆರ್​​.ಗಡ್ಡೇಕರ ತಂಡ ವಂಚನೆ ನಡೆದ ತಿಂಗಳೊಳಗೆ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಬಂಧಿತರು ಸೈಬರ್​ ವಂಚನೆಗಾಗಿ 50 ಮೊಬೈಲ್, 304 ಸಿಮ್ ಕಾರ್ಡ್ ಮತ್ತು 50 ಬೇರೆ ಬೇರೆ ಬ್ಯಾಂಕ್​​ನ ಖಾತೆಗಳನ್ನ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಿಂದ ₹12 ಲಕ್ಷಕ್ಕೂ ಅಧಿಕ ನಗದು, 5 ಮೊಬೈಲ್, 3 ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

ಇನ್ನು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಹಣ ಕಳೆದುಕೊಂಡಿದ್ದ ಯಲ್ಲಪ್ಪ ಜಾಧವ ಅವರ ಖಾತೆಗೆ ಮರಳಿ ₹10 ಲಕ್ಷ ಜಮಾ ಆಗಿದೆ.

Next Story

RELATED STORIES