Top

ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ - ಡಿ.ಕೆ ಶಿವಕುಮಾರ್

ಮರಾಠಾ ಸಮುದಾಯ ಯಾವ ನಿಗಮವನ್ನು ಸಹ ಕೇಳಿರಲಿಲ್ಲ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ

ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ - ಡಿ.ಕೆ ಶಿವಕುಮಾರ್
X

ಬೆಳಗಾವಿ: ಸರ್ಕಾರಕ್ಕೆ ಸಾರಿಗೆ ನೌಕರರ ದುಃಖ, ದುಮ್ಮಾನ, ಭಾವನೆ. ಶ್ರಮದ ಅರಿವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಷ್ಕರದ ಬಗ್ಗೆ ಇವತ್ತು ಮಾಡುವುದಾಗಿ, ಏಕಾಏಕಿ ಹೇಳಿಲ್ಲ. ಮೊದಲೇ ಹೇಳಿ ಮುಷ್ಕರ ನಡೆಸುತ್ತಿದ್ದಾರೆ. ಕರೆದು ಕೂತು ಮಾತನಾಡಿ ಬಗಹರಿಸಬೇಕು ಎಂದರು.

ಇನ್ನು ಸಾರಿಗೆ ಸಂಸ್ಥೆ ಸಾರ್ವಜನಿಕ ವಲಯದಾಗಿದೆ. ಸರ್ಕಾರ ಸಾರಿಗೆ ಸಂಸ್ಥೆಯನ್ನ ವ್ಯಾಪಾರದ ದೃಷ್ಠಿಯಿಂದ ನೋಡಬಾರದು. ಎಲ್ಲದಕ್ಕೂ ಒಂದು ಪರಿಹಾರ ಇದ್ದೆ ಇರುತ್ತೆ. ಸಾರ್ವಜನಿಕರಿಗೆ ಆಗಿತ್ತಿರುವ ತೊಂದರೆ ತಪ್ಪಿಸಬೇಕು. ಸಾರಿಗೆ ಸಂಸ್ಥೆ ನೌಕರರು ಮಾಡುತ್ತಿರುವ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂದು ಹೇಳಿದರು.

ಉಪಚುನಾವಣೆ ವೇಳೆ ಸಿಎಂ ಮರಾಠಾ ಸಮಾಜಕ್ಕೆ ಹಣ ಬಿಡುಗಡೆ ಮಾಡಿದ ವಿಚಾರ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಸಿಎಂ ಬಿ.ಎಸ್​ ಯಡಿಯೂರಪ್ಪ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಮರಾಠಾ ಸಮುದಾಯ ಯಾವ ನಿಗಮವನ್ನು ಸಹ ಕೇಳಿರಲಿಲ್ಲ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.

Next Story

RELATED STORIES