Top

ರಾಕೇಟ್ ವೇಗದಲ್ಲಿ ಸಾಗುತ್ತಿದೆ ತರಕಾರಿ ಬೆಲೆ..!

ಸಿಲಿಕಾನ್​ ಸಿಟಿಯಲ್ಲಿ ಫ್ರುಟ್ಸ್ ಗಿಂತಲೂ ಕಾಷ್ಟ್ಲಿ ಟೊಮ್ಯಾಟೊ ಹಾಗೂ ಬೀನ್ಸ್ ..!

ರಾಕೇಟ್ ವೇಗದಲ್ಲಿ ಸಾಗುತ್ತಿದೆ ತರಕಾರಿ ಬೆಲೆ..!
X

ಬೆಂಗಳೂರು: ರಾಜಧಾನಿಯಲ್ಲಿ ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಗಿದ್ದು , ಈ ಹಿಂದೆ ಆಲೂಗಡ್ಡೆ ಈರುಳ್ಳಿ ಬೆಲೆ ಆದರೂ ಕಡಿಮೆ ಅಂತ ನಿಟ್ಟುಸಿರು ಬಿಟ್ಟವರು, ಈಗ ಮಾರುಕಟ್ಟೆಯಲ್ಲಿ ತರಕಾರಿ ಬೆಳೆಯನ್ನು ಮಾತಾಡಕ್ಕಾಗಲ್ಲ ಅನ್ನ ಪರಿಸ್ಥಿತಿಯನ್ನು ಉಂಟು ಮಾಡಿದೆ.

ಕೊರೊನಾ ಸಂಷ್ಟದಲ್ಲಿರು ಸಿಲಿಕಾನ್ ಸಿಟಿ ಜನರಿಗೆ ಈಗ ಮತ್ತೆ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಮಿರ ಮಿರ ಮಿಂಚುತ್ತಿರೋ ಈ ಟೊಮ್ಯಾಟೋ ಮುಟ್ಟೋಗಿಲ್ಲ. ಬೀನ್ಸ್ ಟಚ್ ಮಾಡೋಂಗಿಲ್ಲ ಬೆಂಡಕಾಯಿ ಸವಿಯೊಂಗಿಲ್ಲ. ಇನ್ನೂ ಪಲಾವ್ ಗೆ ಹಾಕೋ ಕ್ಯಾರೆಟ್ ಖರಿದಿಸೋ ಹಾಗಿಲ್ಲದಂತಾಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ವರುಣನೇ ಆರ್ಭಟವೇ ತರಕಾರಿಗಳು ಗಗನಕ್ಕೇರಲು ಕಾರಣವಾಗಿವೆ.

ಈ ಬೀನ್ಸ್, ಕಳೆದ ವಾರವಷ್ಟೇ 1 ಕೆ.ಜಿಗೆ ಜಸ್ಟ್ 40 ರಿಂದ 50 ರೂಪಿಸ್ ಇತ್ತು. ಆದರೆ, ಈ ವಾರ 100ಕ್ಕೆ ಏರಿಕೆ ಆಗಿದೆ. ಇತ್ತ ಟೊಮ್ಯಾಟೋ 60 ರೂ. ಆಗಿದೆ.

ಹಾಪ್ ಕಾಮ್ಸ್ ನಲ್ಲಿ ಹಣ್ಣು-ತರಕಾರಿ ದರ (ಕೆ.ಜಿ.ಗಳಲ್ಲಿ )

ಬಟಾಣಿ 227

ಬೀನ್ಸ್- ರೂ. 100 ರೂ

ಬೆಂಡೆಕಾಯಿ -54 ರೂ.

ಊಟಿ ಕ್ಯಾರಟ್ - 95 ರೂ.

ಹೀರೇಕಾಯಿ- 56ರೂ.

ಮೂಲಂಗಿ-30 ರೂ.

ಟೊಮ್ಯಾಟೊ -58 ರೂ.

ಈರುಳ್ಳಿ - 43 ರೂ

ಬೀಟ್ರೂಟ್ 29 ರೂ.

ಸೌತೆಕಾಯಿ- 36 ರೂ.

ನುಗ್ಗೆಕಾಯಿ- 92 ರೂ.

ದಪ್ಪ ಮೆಣಸಿನಕಾಯಿ -43 ರೂ.

ಎಲೆಕೋಸು- 28

ಹೌದು ಕಳೆದ ಒಂದು ವಾರದಿಂದ ತರಕಾರಿ ಬೆಲೆ ಏರಿಕೆಯಾಗುತ್ತಲೇ ಇದೆ .. ಬಟಾಣಿ ಒಂದು ವಾರದ ಹಿಂದೆ 150 ರಿಂಧ 160 ಇತ್ತು ಆದ್ರೆ ಇವತ್ತು ಏಕಾಏಕಿ 227 ಕ್ಕೆ ಜಿಗಿದಿದೆ.. ಬೀನ್ಸ್- ರೂ. 100 ಬೆಂಡೆಕಾಯಿ -54 ರೂ.,ಊಟಿ ಕ್ಯಾರಟ್ - 95 ರೂ. ಹೀರೇಕಾಯಿ- 56 ರೂ. ಮೂಲಂಗಿ-30 ರೂ.,ಟೊಮ್ಯಾಟೊ -58 ರೂ. ಬೀಟ್ರೂದಟ್ 29 ರೂ. ಸೌತೆಕಾಯಿ- 36 ರೂ. ನುಗ್ಗೆಕಾಯಿ - 92 ರೂ. ದಪ್ಪ ಮೆಣಸಿನಕಾಯಿ- 43 ರೂ.ಎಲೆಕೋಸು- 28ಕ್ಕೆ ಏರಿಕೆಯಾಗಿದೆ. ಮಳೆ ಕಾರಣ ಬೆಳೆ ಸರಿಯಾಗಿ ಆಗಿಲ್ಲ. ಹಾಗಾಗಿ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ತರಕಾರಿ ಬರ್ತಿಲ್ಲಾ ಅಂತಾರೆ ಹಾಪ್ ಕಾಮ್ಸ್​ನವರು.

ಇನ್ನೂ ಗ್ರಾಹಕರು 1 ಕೆ.ಜಿ ಟೆಮ್ಯಾಟೋ ಖರಿದೀವವರು ಅರ್ಧಕೆ.ಜಿ ಟೆಮ್ಯಾಟೊ ಖರೀದಿಸುತ್ತಿದ್ದಾರೆ.. ಕೊರೊನ ಕಾರಣ ಜೀಬಲ್ಲಿ ದುಡ್ಡಿಲ್ಲ. ಕೆಲಸ ಕಳೆದುಕೊಂಡಿದ್ದೇವೆ.. ಈ ಸಮಯದಲ್ಲಿ ಈ ತರ ಬೆಲೆ ಏರಿಕೆಯಾದ್ರೆ ನಮ್ಮಂತ ಮದ್ಯಮ ವರ್ಗದ ಜನರ ಬದುಕು ಮತ್ತಷ್ಟು ಕಷ್ಟವಾಗುತ್ತೆ ಅಂತಾರೇ ಗ್ರಾಹಕರು.

ಮಳೆಯ ಆರ್ಭಟದಿಂದ ತರಕಾರಿ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಮಳೆ ಹೆಚ್ಚಾಗಿ ರೈತರಿಗೆ ನಷ್ಟವಾಗಿದ್ರೆ ಇತ್ತ ತರಕಾರಿ ಖರೀದಿಸುವ ಗ್ರಾಹಕರ ಜೇಬು ಮತ್ತು ಕೈ ಸುಡುವಂತೆ ಮಾಡಿರುವುದಂತು ಸುಳ್ಳಲ್ಲ. ಮಳೆ ನಿಲ್ಲುವವರೆಗೆ ಬೆಲೆ ಕಮ್ಮಿಯಾಗೋದು ಕೂಡ ಡೌಟ್.


Next Story

RELATED STORIES