Top

ಇಂದು ಕೊನೆಯ ದಿನದ SSLC ಪರೀಕ್ಷೆ

ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮ ಕಡ್ಡಾಯ

ಇಂದು ಕೊನೆಯ ದಿನದ SSLC  ಪರೀಕ್ಷೆ
X

ಬೆಂಗಳೂರು: ಇಂದು ರಾಜ್ಯಾದ್ಯಂತ 2020-21ನೇ ಶೈಕ್ಷಣಿಕ ವರ್ಷದ ಕೊನೆಯ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದತ್ತ ಆಗಮಿಸುತ್ತಿದ್ದು, 10:30ಕ್ಕೆ ಪರೀಕ್ಷೆ ಆರಂಭವಾಗಲಿದೆ.

ಬೆಳಗ್ಗೆ10.30ರಿಂದ 1.30ರವರೆಗೆ ಒಟ್ಟು ಮೂರು ವಿಷಯಗಳಿಗೆ 120 ಅಂಕಗಳ ಪರೀಕ್ಷೆ ನಡೆಯಲಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಕೇವಲ 12 ಮಕ್ಕಳಿಗೆ ಅವಕಾಶವಿದ್ದು, ಕೆಮ್ಮು, ನೆಗಡಿ, ಜ್ವರ ಇರುವವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಎಲ್ಲಾ ಜಿಲ್ಲೆಗೂ ಎಸ್​ಎಸ್​ಎಲ್​ಸಿ ಒಂದೊಂದು ನೋಡೆಲ್ ಆಫೀಸರ್ ನೇಮಕ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ 200ಮೀ. ಸುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಇನ್ನು ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮ ಕಡ್ಡಾಯವಾಗಿದೆ.

Next Story

RELATED STORIES