Top

ಲಾಕ್​ಡೌನ್​ ವೇಳೆ ದರೋಡೆ: ರೌಡಿಶೀಟರ್ಸ್​​ ಅರೆಸ್ಟ್​​

ಫುಡ್​ ಡೆಲಿವರಿ ಬಾಯ್​ಗಳನ್ನು ಸುಲಿಗೆ ಮಾಡ್ತಿದ್ದ ಆರೋಪಿಗಳಿಗೆ ಜೈಲೂಟ

ಲಾಕ್​ಡೌನ್​ ವೇಳೆ ದರೋಡೆ: ರೌಡಿಶೀಟರ್ಸ್​​ ಅರೆಸ್ಟ್​​
X

ಬೆಂಗಳೂರು: ಫುಡ್​ ಡೆಲಿವರಿ ಬಾಯ್​ಗಳನ್ನು ಟಾರ್ಗೆಟ್​ ಮಾಡಿ ದರೋಡೆ ಮಾಡುತ್ತಿದ್ದ ರೌಡಿಶೀಟರ್​ಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ಠಾಣೆಯ ರೌಡಿಶೀಟರ್ ಯಶವಂತ ಅಲಿಯಾಸ್​ ತಿಪ್ಪೆ, ಕಿರಣ್ ಅಲಿಯಾಸ್​ ಅಮವಾಸ್ಯೆ ಬಂಧಿತ ಆರೋಪಿಗಳು.

ಆರೋಪಿಗಳು ರಿಯಲ್​ ಎಸ್ಟೇಟ್​ ಉದ್ಯಮಿಗಳನ್ನು ಬೆದರಿಸಿ ಕಮೀಷನ್​ ಪಡೆಯುತ್ತಿದ್ದರು. ಆದರೆ ಸದ್ಯ ಲಾಕ್​ಡೌನ್​ ಆಗಿರುವ ಕಾರಣ ಹಣಕ್ಕಾಗಿ

ದರೋಡೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೆಂಗೇರಿಯ ಚಂದ್ರಕಾಂತ್ ಎಂಬುವವರ ಬೈಕ್​ ಕದ್ದ ಆರೋಪಿಗಳು , ಜೊಮ್ಯಾಟೋ, ಡಾಮಿನಾಸ್​ ಸೇರಿದಂತೆ ಇತರ ಕಂಪನಿಗಳ ಫುಡ್​ ಡೆಲಿವರಿ ಬಾಯ್​​ಗಳನ್ನು ಅಡ್ಡ ಹಾಕಿ ಮಚ್ಚು ಹಿಡಿದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಇನ್ನು ಆರೋಪಿಗಳು ಬೈಕ್​ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿಗಳ ವಿರುದ್ಧ ಸಾಲು ಸಾಲು ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಗಿಳಿದ ಪೊಲೀಸರು ಸದ್ಯ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

Next Story

RELATED STORIES