Top

ನಾಡಪ್ರಭು ಕೆಂಪೇಗೌಡ ಜಯಂತಿ ಮುಂದೂಡಿಕೆ - ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್

ನಾಡಪ್ರಭು ಕೆಂಪೇಗೌಡ ಜಯಂತಿ ಮುಂದೂಡಿಕೆ - ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್
X

ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ ಹಿನ್ನೆಲೆ ಬಿಬಿಎಂಪಿಯಿಂದ ಪ್ರತಿವರ್ಷ ಆಚರಿಸುವ ಕೆಂಪೇಗೌಡ ಜಯಂತಿ ಮುಂದೂಡಿಕೆ ಮಾಡಲಾಗಿದ್ದು, ಸಪ್ಟೆಂಬರ್ 2ಕ್ಕೆ ನಿಗದಿಯಾಗಿತ್ತು ಎಂದು ಮೇಯರ್​ ಗೌತಮ್​ ಕುಮಾರ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಇಂದು ನಾವೆಲ್ಲಾ ಸೇರಿದ್ವಿ. ಮಾಜಿ ರಾಷ್ಟ್ರಪತಿಯವರ ವಿಧಿವಶ ಹಿನ್ನೆಲೆ ಮುಂದೂಡಿದ್ದೇವೆ. ಸೆ.2ನೇ ತಾರೀಖು ಜಯಂತಿ ಮಾಡುತ್ತಿಲ್ಲ ಎಂದು ಅವರು ತಿಳಿಸಿದರು.

ಇನ್ನು ಆಯುಕ್ತರ ಜತೆ ಚರ್ಚಿಸಿ ಮುಂದಿನ ದಿನಾಂಕ ನಿಗದಿ ಮಾಡುತ್ತೇವೆ. ಪ್ರಣಬ್ ಮುಖರ್ಜಿ ಅವರ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ, ದೇಶಕಂಡ ಗಣ್ಯವ್ಯಕ್ತಿ ಅವರು, ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರಿಗೆ ಎಕಾನಮಿಯಲ್ಲಿ ಇದ್ದಂತ ಜ್ಞಾನ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಗೌತಮ್​ ಕುಮಾರ್ ಹೇಳಿದರು.

Next Story

RELATED STORIES